ಕುಡಿಯುವ ನೀರು ಸಮರ್ಪಕ ಸರಬರಾಜಿಗೆ ಪಾಲಿಕೆ ಅಧಿಕಾರಿಗಳ ಜೊತೆ ಶಾಸಕರ ಸಭೆ

ಬಳ್ಳಾರಿ ಮೇ 21 : ನಗರದ ಜನತೆಗೆ ಸಮರ್ಪಕವಾಗಿ ‌ಕುಡಿಯುವ ನೀರು ಸರಬರಾಜು ಕುರಿತು ಇಂದು ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಪಾಲಿಕೆಯಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದರು.
ಆಯುಕ್ತೆ ಪ್ರೀತಿ ಗೆಹ್ಲೋಟ ಅವರೊಂದಿಗೆ ಪಾಲಿಕೆ ಮತ್ತು‌ ಕೆಯುಡಬ್ಲುಎಸ್ ಇಂಜಿನೀಯರ್ ಗಳ ಸಭೆ ನಡೆಸಿದ ಶಾಸಕರು ದಿನದ 24 ತಾಸು ನೀರು ಸರಬರಾಜು ಮಾಡುವ ಯೋಜನೆಯ ಪ್ರಗತಿ‌ ಪರಿಶೀಲನೆ ಮಾಡಿದರು. ಆದಷ್ಟು ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ಸೂಚಿಸಿದರು.

ಸಮಸ್ಯೆ ಇಲ್ಲ:
ನಗರದ ಜನತೆಗೆ ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದು. ಅಲ್ಲಿಪುರ ಕೆರೆಯಲ್ಲಿ ಸಧ್ಯ 5.2 ಮೀಟರ್ ನೀರಿನ ಸಂಗ್ರಹ ಇದೆ. ವಾರಕ್ಕೆ ನೀರು ಸರಬರಾಜು ಮಾಡಿದರೂ. ಬರುವ ಆಗಷ್ಟ ವರೆಗೆ ನೀರಿನ ಲಭ್ಯತೆ ಇರಲಿದೆಂದು ಶಾಸಕರು ಸಂಜೆವಾಣಿಗೆ ತಿಳಿಸಿದರು.