ಕುಡಿಯುವ ನೀರು ಪೂರೈಕೆಗೆ ಗ್ರಹಣ

ರಾಜಕೀಯ ಇಚ್ಚಾಶಕ್ತಿ ಕೊರತೆ
ದುರುಗಪ್ಪ ಹೊಸಮನಿ
ಲಿಂಗಸುಗೂರು,ಜೂ.೧೯-
ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರು ಹಳ್ಳಿಗೆ ಜಲ ಜೀವನ ಮಿಶನ್ ಯೋಜನೆ ಹಳ್ಳ ಹಿಡಿದಿದೆ.
೧೫ ವರ್ಷ ಕಳೆದರೂ ಕೂಡ ಇಲ್ಲಿಯವರೆಗೆ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೂ ಶುದ್ದ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗ್ರಾಮೀಣ ಜನರ ಆರೋಗ್ಯ ಮತ್ತು ಇತರೆ ಮಹತ್ವಾಕಾಂಕ್ಷಿ ಯೋಜನೆ ತಲುಪಿಸುವ ಕೆಲಸ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಡಬೇಕು. ಆದರೆ ಇಲ್ಲಿರುವ ಬಲಿತ ಅಧಿಕಾರಿಗಳ ಅಂಧಾಕಾರದಿಂದ ಈ ಯೋಜನೆ ಮರೀಚಿಕೆಯಾಗಿದೆ.
ಜಲ ನಿರ್ಮಲ ಯೋಜನೆಗೆ ಅಂದಿನ ಸರ್ಕಾರದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಕಂದಾಯ ಸಚಿವ ಜಿ ಕರುಣಾಕರ ರೆಡ್ಡಿ ೨೦೦೮ ಇವರು ಅಡಿಗಲ್ಲು ಸಮಾರಂಭ ಮಾಡಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಮತ್ತು ೨೦೧೧ರಲ್ಲಿ ಟ್ಯಾಂಕ್ ನಿರ್ಮಿಸಿರುವ ಏಜೆನ್ಸಿ ಕರ್ನಾಟಕ ಭೂ ಸೇನಾ ಇಲಾಖೆ ಕಾರ್ಯನಿರ್ವಸಿದೆ ಆದರೆ ಭೂ ಸೇನಾ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಅಸಡ್ಡೆಯಿಂದ ಇಂದಿಗೂ ಶುದ್ದ ಕುಡಿಯುವ ನೀರು ಸರಬರಾಜು ಮಾಡಲು ಗ್ರಹಣ ಹಿಡಿದಿದೆ ಎಂದರೆ ತಪ್ಪಾಗಲಾರದು.
ಕೋಟ್ಯಾಂತರ ರೂಪಾಯಿ ಹಣ ನೀರಲ್ಲಿ ಹೋಮ
ಅಂದಿನ ಸರ್ಕಾರವು ಶುದ್ದ ಕುಡಿಯುವ ನೀರು ಪೂರೈಕೆ ಮಾಡಲು ಕೋಟ್ಯಾಂತರ ರೂಪಾಯಿ ಹಣ ನೀಡಿ ಕಾಮಗಾರಿ ಅನುಷ್ಠಾನಕ್ಕೆ ಚಾಲನೆ ನೀಡಿದರು ಆದರೆ ಏಜೆನ್ಸಿ ಪಡೆದ ಕರ್ನಾಟಕ ಭೂ ಸೇನಾ ನಿಗಮದ ಅಧಿಕಾರಿಗಳು ಅರೆ ಬರೆ ಕಾಮಗಾರಿ ಮಾಡಿ ಈ ಯೋಜನೆ ಹಳ್ಳ ಹಿಡಿಯುವ ಮೂಲಕ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಮತ್ತು ಈಗಿರುವ ಮಸ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಣ್ಣು ಮುಚ್ಚಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ ಎಂಬುದನ್ನು ನಿರ್ಮಾಣವಾಗಿರುವ
ಕುಡಿಯುವ ನೀರಿನ ಮದರ ಟ್ಯಾಂಕ್ ಸಾಕ್ಷಿಯಾಗಿದೆ.
ಅಭಿವೃದ್ಧಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ನೀರಲ್ಲಿ ಹೋಮ ಗುತ್ತೆದಾರರ ಕರಾಮತ್ತು ಅಧಿಕಾರಿಗಳ ಕಮೀಷನ್ ದಂದೆಯಿಂದ ಮೂರು ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಮೀನಾಮೇಷ ಮಾಡುವ ಮುಖಾಂತರ ಆಡಳಿತ ನಡೆಸುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮತವಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಸಂತೆಕಲ್ಲೂರ ಇವರು ಬಲವಾಗಿ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ಜಲ ನಿರ್ಮಲ ಯೋಜನೆ ಕಾಮಗಾರಿ ೧೫ ವರ್ಷ ಕಳೆದರೂ ಕೂಡ ಇಲ್ಲಿಯವರೆಗೆ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಎಚ್ಚತ್ತುಕೊಳ್ಳದೆ ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಪ್ರಸ್ತುತ ಸಂತೆಕಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಹಳ್ಳಿಯ ಜನರು ಶುದ್ದ ಕುಡಿಯುವ ನೀರು ಮರೀಚಿಕೆ ಯಾಗಿದೆ ಇದರಲ್ಲಿ ಜಲ ನಿರ್ಮಲ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಯೋಜನೆ ಹಳ್ಳ ಹಿಡಿದಿದೆ.
ಈ ಯೋಜನೆ ಹಳ್ಳ ಹಿಡಿಯಲಿಕ್ಕೆ ರಾಜಕೀಯ ಇಚ್ಚಾಶಕ್ತಿ ಹಾಗೂ ಕಾಣದ ಕೈಗಳು ಕೆಲಸ ಮಾಡುತ್ತಿದ್ದಾರೆ ಎಂದು ಯಲ್ಲಾಲಿಂಗ ಕುಣಿಕೆಲ್ಲೂರ ರವರು ಆಕ್ರೋಶದ ಮಾತುಗಳನ್ನು ಆಡುವ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂತೆಕಲ್ಲೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮೂರು ಹಳ್ಳಿಗೆ ಭೇಟ ನೀಡಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು ಮೂರು ಹಳ್ಳಿಯ ಜನರ ಆಗ್ರಹವಾಗಿದೆ.
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಕೊಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಂಪೂರ್ಣವಾಗಿ ಕಳಪೆ ಆಡಳಿತ ಮಂಡಳಿ ಯಂತ್ರವು ಜನ ಸಾಮಾನ್ಯರ ಮೇಲೆ ಜೀವ ಹಿಂಡುವ ಆಡಳಿತ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಡಳಿತ ಎಚ್ಚತ್ತುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಕಲುಷಿತ ನೀರು ಪೂರೈಕೆ ಮಾಡಿದರೆ ಮತ್ತು ಸಾಂಕ್ರಾಮಿಕ ರೋಗ ಹರಡಿದರೆ ಅದಕ್ಕೆ ಅಧಿಕಾರಿಳೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಖಡಕ್ ಗ್ರಾಮದ ಜನರು ಎಚ್ಚರಿಕೆ ನೀಡಿದ್ದಾರೆ.