ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಅರಬೆತ್ತಲೆ ಪಾದಯಾತ್ರೆ

ರಾಯಚೂರು,ಆ.೧೧-
ಹಟ್ಟಿ ಪಟ್ಟಣಕ್ಕೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡುವಂತೆ ಆಗ್ರಹಿಸಿ ನವಭಾರತ ಹಿಂದೂ ದಲಿತ ಜಿಲ್ಲಾ ಸಮತಿ ಪದಾಧಿಕಾರಿಗಳು ಅರಬೆತ್ತಲೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಹಟ್ಟಿ ಪಟ್ಟಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಪ್ರತಿಭಟನೆ ನಡೆಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಅಧಿಕಾರಿಗಳ ನಿರ್ಲಕ್ಷ ದೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ೧೫ ದಿನಗಳ ಒಳಗೆ ಹಟ್ಟಿ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಹಟ್ಟಿ ಪಟ್ಟಣದ ಸಮಗ್ರ ಅಭಿವೃದ್ಧಿ ಶ್ರಮವಹಿಸಿಬೇಕೆಂದು ಒತ್ತಾಯಿಸಿದರು.
ಹಟ್ಟಿ ಪಟ್ಟಣಕ್ಕೆ ೧೫ ದಿನಗಳ ಒಳಗಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಶಾಶ್ವತ ಕುಡಿಯುವ ನೀರಿನ ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ತನಿಖೆ ಮಾಡಬೇಕು.
ಹಿಂದೂ ರುದ್ರ ಭೂಮಿಗಾಗಿ ಸ್ಥಳ ಒದಗಿಸಬೇಕು. ಹಟ್ಟಿ ಪಟ್ಟಣಕ್ಕೆ ಬಸ್ ಡಿಪೋ ಮಂಜೂರಾಗಿದ್ದು ತಕ್ಷಣವೇ ಕಾರ್ಯ ಆರಂಭಗೊಳಿಸಿ ಲಿಂಗಸುಗೂರಿನಿಂದ ಕಲಬುರಗಿಗೆ ತೆರಳುವ ಬಸ್ಸುಗಳನ್ನು ಹಟ್ಟಿ ಮಾರ್ಗದಿಂದ ಚಲಿಸುವಂತೆ ಆದೇಶಿಸಬೇಕು.
ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಚುನಾವಣೆ ಬೂತ್‌ಗಳನ್ನು ಹಾಗೂ ಅಧಿಕ ಜನಸಂಖ್ಯೆಯನ್ನು ಹೊಂದಿದ ಹಟ್ಟಿ ಪಟ್ಟಣವಾಗಿದ್ದು, ಕೂಡಲೇ ತಾಲೂಕಾ ಕೇಂದ್ರವನ್ನಾಗಿ ಮಾಡಬೇಕು.
ಪಟ್ಟಣದಲ್ಲಿ ಡಿಪ್ಲೋಮಾ ಇನ್ ಮೈನಿಂಗ್ ಇಂಜಿನೀಯಲಿಂಗ್, ಡಿಪ್ಲೊಮಾ ಕಾಲೇಜು ಮಂಜೂರು ಮಾಡಿ ಕಾರ್ಯಾರಂಭಗೊಳಸಲು ಆದೇಶಿಸಬೇಕು. ಹಟ್ಟಿ ಪಟ್ಟಣದ ಸರ್ಕಾರದ ಜಾಗ, ಉದ್ಯಾನವನ, ಸಿ.ಎ. ಸೈಟು, ಇನ್ನಿತರ ಜಾಗಗಳನ್ನು ಮಾರಾಟ ಮಾಡಿದ ಭ್ರಷ್ಟಾಚಾರವೆಸಗಿದ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ, ವರದಿಯ ಪ್ರತಿ ನೀಡಬೇಕು.
ಪಟ್ಟಣದಲ್ಲಿ ಹೈಟಕ್ ಗ್ರಂಥಾಲಯ ನಿರ್ಮಾಣ ಮಾಡಬೇಕು. ಸರ್ಕಾರಿ ಅನುದಾನವನ್ನು ಭ್ರಷ್ಟಾಚಾರವಿಲ್ಲದೆ ಸರಿಯಾಗಿ ಬಳಕೆ ಆಗುವಂತೆ ಆದೇಶಿಸಬೇಕು.
ಈ ಸಂದರ್ಭದಲ್ಲಿ ವಿನೋದ ಕುಮಾರ, ಅಮರೇಶ, ವೆಂಕಟೇಶ, ಭೀಮರಾಯ ಭಜಂತ್ರಿ ಸೇರಿದಂತೆ ಉಪಸ್ಥಿತರಿದ್ದರು.