ಕುಡಿಯುವ ನೀರು, ಜಾನುವಾರು ಮೇವು ಪೂರೈಕೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ

ಧಾರವಾಡ,ಫೆ27: ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜನರಿಗೆ ಕುಡಿಯುವ ನೀರು, ಮೇವು ಕೊರತೆ ಆಗದಂತೆ ಮೊದಲ ಆದ್ಯತೆ ನೀಡಿ, ಯಾವುದಕ್ಕೂ ಕೊರತೆ ಇಲ್ಲ. ಜನರ ಬೇಡಿಕೆಗೆ ಅನುಗುಣವಾಗಿ ಕೆಲಸ ಮಾಡಿ. ಜನಪ್ರತಿನಿಧಿಗಳ ಗಮನಕ್ಕೂ ತನ್ನಿ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ, ಮಾತನಾಡಿದರು.

ಪ್ರತಿ ವಾರ ತಹಶೀಲ್ದಾರರು ತಾಲೂಕು ಟಾಸ್ಕ್ ಫೆÇೀರ್ಸ್ ಸಮಿತಿ ಸಭೆ ನಡಿಸಿ, ತಾಲೂಕಿನ ಬರ ಪರಿಸ್ಥಿತಿ, ನೀರು, ಮೇವು ಪೂರೈಕೆ, ನರೇಗಾ ಉದ್ಯೋಗ ನೀಡಿಕೆ ಕುರಿತು ಚರ್ಚಿಸಿ, ಕ್ರಮವಹಿಸಬೇಕು ಎಂದರು.

ಜಿಲ್ಲೆಯಲ್ಲಿ ಲಭ್ಯವಿರುವ ನೀರನ್ನು ಸೋರಿಕೆ, ಅಪವ್ಯಯವಾಗದಂತೆ ತಡೆದು, ಸಮಪರ್ಕವಾಗಿ ಬಳಕೆ ಮಾಡುವಂತೆ ಗಮನಿಸಬೇಕು. ಸಾರ್ವಜನಿಕರಿಗೆ ಶುದ್ದವಾದ ಕುಡಿಯುವ ನೀರು ಪೂರೈಕೆ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಬಹುತೇಕ ಕಡೆಗಳಲ್ಲಿ ಹಳೆ ಪೈಪಲೈನ ಇರುವುದರಿಂದ ಪೈಪಗಳಲ್ಲಿ ಸೋರಿಕೆ ಆಗಿ, ನೀರು ಕಲ್ಮಷವಾಗುವ ಸಾಧ್ಯತೆ ಇರುತ್ತದೆ. ನೀರು ಕಲ್ಮಷವಾಗುವ ಬಗ್ಗೆ ಎಚ್ಚರಿಕೆವಹಿಸಬೇಕು. ಕ್ಲೋರಿನೇಶನ್ ಸರಿಯಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಈಗಾಗಲೇ ಎಲ್ಲ ತಾಲೂಕಿನ ತಹಶೀಲ್ದಾರರು ಮತ್ತು ಟಾಸ್ಕ್ ಪೊರ್ಸ್ ಸಮಿತಿ ಸದಸ್ಯರು ಮುಂದಿನ ಮೂರು ತಿಂಗಳವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗೃತೆ ಕ್ರಮ ಕೈಗೊಂಡಿದ್ದಾರೆ. ನಗರ ಮತ್ತು ಗ್ರಾಮಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಬೊರ್‍ವೆಲ್‍ಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ವಹಿಸಿದ್ದಾರೆ. ಅಗತ್ಯವಿದ್ದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ವಿವಿಧ ನಗರ ಮತ್ತು ಗ್ರಾಮಗಳಲ್ಲಿ ಸುಮಾರು 301 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಮಾಲೀಕರೊಂದಿಗೆ ಚರ್ಚಿಸಿದ್ದಾರೆ. ಮತ್ತು ಈ ಪೈಕಿ 139 ಕೊಳವೆಬಾವಿ ಮಾಲೀಕರಿಂದ ನೀರು ಖರಿದಿಸಲು ಒಪ್ಪಿಗೆ ಪತ್ರ ಪಡೆದಿದ್ದಾರೆ. ಹಾಗೂ ಶೀಘ್ರದಲ್ಲಿ ಇನ್ನು 162 ಕೊಳವೆಬಾವಿ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆಯಲು ಕ್ರಮವಹಿಸಿದ್ದಾರೆ. ಕುಂದಗೋಳ ತಾಲೂಕಿನ ಶಿರೂರ, ಕೋಡ್ಲಿವಾಡ ಹಾಗೂ ಹಳೆ ಹಂಚನಾಳ ಸೇರಿ ಈ ಮೂರು ಗ್ರಾಮಗಳಲ್ಲಿ ಕೋಳವೆಬಾವಿಗಳು ಲಭ್ಯವಿಲ್ಲ. ತಾಲೂಕಾ ಟಾಸ್ಕ್‍ಪೊರ್ಸ್ ಸಮಿತಿ ತೀಮಾರ್ನದಂತೆ ಟ್ಯಾಂಕರ್ ಮೂಲಕ ಅಥವಾ ಪೈಪಲೈನ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.