ಕುಡಿಯುವ ನೀರು ಗಂಗಾಕಲ್ಯಾಣಯೋಜನೆಗೆ ಆದ್ಯತೆ ನೀಡಬೇಕು

ಪದೆ ಪದೇ ವಿದ್ಯುತ ಕಡತಗೋಳಿಸದಂತೆ ಜೆಸ್ಕಾಂ ಅಭಿಯಂತರಗೆ ಸಂಸದ ನಾಯಕ ತಾಕಿತ..!
ಲಿಂಗಸೂಗೂರು,ಜೂ.೧೩-
ಪದೆ ಪದೆ ವಿದ್ಯುತ ಕಡಿತಗೊಳಿಸದಂತೆ ಜೆಸ್ಕಾಂ ಎಇಇಗೆ ಸಂಸದ ರಾಜಾ ಅಮರೇಶ್ವರ ನಾಯಕ ತಾಕಿತಮಾಡಿ ಮಳೆ ಗಾಳಿ ಬಂದರೆ ಸಾಕು ವಿದ್ಯುತ ಕಡಿತಮಾಡುವದರಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿ ಕೂಡಲೆ ಕುಡಿಯುವ ನೀರಿನ ಯೋಜನೆಗಳಿಗೆ ಸಂಪರ್ಕಗೊಳಿಸಲು ಸೂಚಿಸಿದರು.
ತಾ.ಪಂ ಸಭಾಂಗಣದಲ್ಲಿ ಶಾಸಕ ಮಾನಪ್ಪವಜ್ಜಲ್ ಅಧ್ಯಕ್ಷತೆಯಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯುದ್ದೇಶಿಸಿ ಮಾತನಾಡಿದರು ತಾಲೂಕಿನಲ್ಲಿ ಎಷ್ಟು ವಿದ್ಯುತ ಪರಿವರ್ತಕ ಸುಟ್ಟಿವೆ ಕೂಡಲೆ ರೀಪೆರಿಯಾಗುತ್ತಿಲ್ಲಾ ಕಾರಣ ಎನು ಹಾಗೂ ಗಂಗಾಕಲ್ಯಾಣ ಸಂಪರ್ಕದ ಬಗ್ಗೆ ಶಾಸಕ ಮಾನಪ್ಪ ವಜ್ಜಲ್ ಜೆಸ್ಕಾಂ ಎಇಇ ಕೆಂಚಪ್ಪವರನ್ನು ಕೇಳಿದಾಗ ಉತ್ತರಿಸಿದ ಎಇಇ ತಾಲೂಕಿನಲ್ಲಿ ಒಟ್ಟು ೩೪ ಟಿಸಿ ಸುಟ್ಟಿದ್ದು ದುರಸ್ತ ಮಾಡಲು ತೊಂದರೆಯಿದ್ದು ಆದಷ್ಟು ರಿಪೇರಿ ಮಾಡಿಸುವದಾಗಿ ತಿಳಿಸಿ ಗಂಗಾಕಲ್ಯಾಣ ೪ ಯೋಜನೆಗಳಿಗೆ ಸಂಪರ್ಕ ಕೊಡಲಿದ್ದು ಚುನಾವಣೆ ಕಾರಣ ವಿಳಂಬವಾಗಿದೆಂದು ಗ್ರಾಮೀಣ ಭಾಗದಲ್ಲಿ ೭ಗಂಟೆ ತ್ರಿಪೇಸ್ ಹಾಗೂ ೭ಗಂಟೆ ಸಿಂಗಲ ಪೇಸ ವಿದ್ಯುತ ಸರಬರಾಜ ಮಾಡಲಾಗುತ್ತಿದ್ದು ವಿದ್ಯುತ ಸಮಸ್ಯೆ ಇರುವ ಪೈದೊಡ್ಡಿ ಭಾಗದಲ್ಲಿ ಹೊಸ೧೧ಕೆವಿ ವಿದ್ಯುತಸ್ಥಾವರ ಸ್ಥಾಫಿಸಬೇಕು ಈಕುರಿತು ಇಲಾಖೆಗೆ ಡಿಪಿಆರ ಕಳಿಸಿದ್ದು ೧ರಿಂದ ೨ ಕೋಟಿರೂ ಅನುದಾನ ಬೇಕಾಗಿರುತ್ತದೆ ಎಂದು ಇಲಾಖೆಮೇಲಾಧಿಕಾರಿಗಳು ನಿಮ್ಮ ಜೋತೆ ಮಾತನಾಡಿರುವರು ಎಂದಾಗ ಶಾಸಕ ಮಾನಪ್ಪ ವಜ್ಜಲ್ ಯಾ ಅಧಿಕಾರಿ ನನ್ನ ಜೊತೆ ಮಾತನಾಡಿಲ್ಲಾ ನಿವು ಸುಳ್ಳು ಏಕೆ ಹೇಳುತ್ತಿರಿ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮನೆ ಮನೆಗೆ ಗಂಗೆ ಜಲಧಾರೆ ಯೋಜನೆ ಕಾಮಗಾರಿ ಗುಣಮಟ್ಟದ ಕಾಮಗಾರಿ ನಡೆಯಬೇಕು ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿ ಸದರಿ ಯೋಜನೆಗೆ ಉಪಯೋಗಿಸುವ ಪೈಪಗಳ ಗಾತ್ರ ಗುಣಮಟ್ಟದ ನಿಗದಿತ ಸಾಮಗ್ರಗಳ ಇರಬೇಕು ನಾ ನಿಮ್ಮ ಸ್ಥಳಕ್ಕೆ ಬಂದು ಪರಿಶಿಲಿಸುವೆ ಎನಾದರು ತಪ್ಪು ಕಂಡು ಬಂದರೆ ನಿಮ್ಮ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಪಂ ಎಇಇ ಭರತಕುಮಾರವರಿಗೆ ತಾಕಿತ ಮಾಡಿದಾಗ ಸಂಸದ ರಾಜಾಅಮರೇಶ್ವರ ನಾಯಕ ಮಾತನಾಡಿ ಗ್ರಾಮೀಣ ಭಾಗದ ಪ್ರತಿ ಮನೆಗೆ ನಳದ ನೀರು ಪೋರೈಕೆ ಮಾಡುವ ಜಲಜೀವನ ಮಿಷನ್ ಜೆಜೆ ಎಮ್ ೧ಹಾಗೂ೨ಮತ್ತು೩ ೩ನೇ ಹಂತದ ಕಾಮಗಾರಿಯಲ್ಲಿ ಹಲವಾರು ಕಡೆ ವ್ಯತಾಸ ಕಂಡುಬಂದಿದ್ದು ಕಾರಣ ಅತಿ ಕಡಿಮೆದರದಲ್ಲಿ ಟೆಂಡರ ಪಡೆದ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡದೆ ಅರ್ಧಕ್ಕೆ ಬಿಟ್ಟು ಹೋಗುತ್ತಾರೆ ಇದರಿಂದ ಯಾರಿಗೆ ತೊಂದರೆ ಸದರಿ ಯೋಜನೆಯಲ್ಲಿ ಯಾವದೆ ಗ್ರಾಮಗಳು ಡ್ರಾಪ ಆಗದಂತೆ ನೋಡಿಕೊಳ್ಳಬೇಕು ಯಾವದೆ ತಾಂಡಾ ದೊಡ್ಡಿ ಹೊರವಲಯದಲ್ಲಿ ಯೋಜನೆ ಸರಿಯಾಗಿ ಜಾರಿ ತರಬೇಕು ಎಂದಾಗ ಎಇಇ ಮಾತನಾಡಿ ೩ ನೇ ಹಂತದಜೆಜೆ ಎಮ್ ಕಾಮಗಾರಿಯಲ್ಲಿ ಟೆಂಡರ ಲೆಸ ಆಗಿರುವದಿಲ್ಲಾ ಸೂಕ್ತ ವ್ಯವಸ್ಥೆ ಮಾಡುವದಾಗಿ ತಿಳಿಸಿದರು. ಶಾಸಕ ಮಾನಪ್ಪವಜ್ಜಲ್ ಸಂಸದ ರಾಜಾಅಮರೇಶ್ವರ ನಾಯಕ ಮಾತನಾಡಿ ಹಟ್ಟಿ ಗ್ರಾಮz ಕುಡಿಯುವ ನೀರಿನ ಸಮಸ್ಯೆ ಯುದ್ದೋಪಾದಿಯಲ್ಲಿ ಕೂಡಲೆ ಬಗೆಹರಿಸಬೇಕು ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಕುಡಿಯುವ ನೀರಿನ ಅಭಾವವುದೆ ಕೂಡಲೆವ್ಯವಸ್ಥೆ ಮಾಡಲು ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಕುಟುಂಬಕಲ್ಯಾಣ ಇಲಾಖೆಅಧಿಕಾರಿ ಹಾಗೂ ಕೃಷಿ ಪರಿಶೀಷ್ಠ ಪಂಗಡ ಪಿಡಬ್ಲಯೂಡಿ ಇತರೆ ಇಲಾಖೆಗಳ ಚರ್ಚೆ ನಡೆಯತು.
ತಾಲೂಕು ಪಂಚಾಯತ ಅಧಿಕಾರಿ ಅಮರೇಶ ಯಾದವ ಸಹಾಯಕ ಆಯುಕ್ತ ಶಿಂಧೆಅವಿನಾಶ ತಹಸೀಲ್ದಾರಡಿಎಸ್ ಜಮಾಧಾರ ಟಿಎಚ್ ಓ ಡಾ ಅಮರೇಶ ಪಾಟೀಲ ಜಿಪಂ ಎಇಇ ಶಿವಕುಮಾರ ಭುಸೇನಾ ಅಧಿಕಾರಿ ಶಷಾಂಖ ಅರಣ್ಯಾಧಿಕಾರಿ ಚನ್ನಬಸವ ಬಿಇಓ ಇತರರು ಭಾಗವಹಿಸಿದ್ದರು.ನರೇಗಾ ಅಧಿಕಾರಿ ಸೋಮನಗೌಡ ಸ್ವಾಗತಿಸಿದರು.