ಕುಡಿಯುವ ನೀರು ಕೈಗಾರಿಕಾ ಘಟಕಳಿಗೆ ಪೂರೈಕೆ ಪೈಪ್‌ಲೈನ್ ಕಾಮಗಾರಿ

ಯಾವ ಸಭೆ ನಿರ್ಣಯ:ಯಾರು ಗುತ್ತೇದಾರರು- ಭಾರಿ ಅಕ್ರಮ
ರಾಯಚೂರು ಏ ೨೧:-ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದರೂ, ನಗರಸಭೆ ಕುಡಿಯುವ ನೀರು ಮನ್ಸಾಪೂರ ರಸ್ತೆಯ ಕೈಗಾರಿಕೆಗಳಿಗೆ ಪೈಪ್ ಲೈನ್ ಮೂಲಕ ನೀರು ಪೂರೈಕೆ ಅಕ್ರಮಕ್ಕೆ ಮುಂದಾಗಿದೆ ಎಂದು ಜಿಲ್ಲಾ ಪಾಂಚಾಯತ್ ಮಾಜಿ ಸದಸ್ಯ ಬಷೀರುದ್ದಿನ್ ಅವರು ಆರೋಪಿಸಿದ್ದಾರೆ.
ಮನ್ಸಾಪೂರ ರಸ್ತೆಯಲ್ಲಿ ಭಾರಿ ಪೈಪ್ ಸಂಗ್ರಹಿಸಲಾಗಿದೆ. ನಗರಸಭೆ ಕಿರಿಯ ಅಭಿಯಂತರರು ಮತ್ತು ಸಿಬ್ಬಂದಿ ವರ್ಗ ಈ ಕಾಮಗಾರಿಯನ್ನು ಉಸ್ತುವಾರಿ ಮಾಡುತ್ತಿದ್ದರೆ. ಬೇಸಿಗೆಯಲ್ಲಿ ಯಾವುದೆ ಕಾರಣಕ್ಕೆ ಕುಡಿಯುವ ನೀರು ಕೈಗಾರಿಕೆಗಳಿಗೆ ನೀಡುವುದು ನಿಯಮಭಾಹಿರವಾಗಿದೆ. ಏಪ್ರೀಲ್,ಮೇ ಮತ್ತು ಜೂನ್ ತಿಂಗಳುಗಳಲ್ಲಿ ನಗರ ನಿವಾಸಿಗಳಗೆ ಕುಡಿಯುವ ನೀರುನ ಸಮಸ್ಯೆ ಉದ್ಭವಿಸುವ ಹಿನ್ನೆಲೆಯಲ್ಲಿ ಕೈಗಾರಿಕೆಗಳ ನೀರಿನ ಸಂಪರ್ಕ ಕಡಿತಗೊಳಿಸಿ ಜನರಗೆ ಕುಡಿಯುವ ನೀರು ಪೂರೈಸಲಾಗುತ್ತದೆ.ಆದರೆ ನೂತನ ಸಮಿತಿ ಅಸ್ಥಿತ್ವಕ್ಕೆ ಬಂದನಂತೆ ಒಂದೊಂದು ಹಗರಣ ಸರದಿ ರೀತಿಯಲಿ ನಡೆಯುತ್ತಿದ್ದು, ಈಗ ಕೈಗಾರಿಕೆಗಳಿಗೆ ಕುಡಿಯುವ ನೀರು ಪೂರೈಕೆ ಹಗರಣ ಬಹಿರಂಗಗೊಂಡದೆ.
ಮಸ್ಸಾಪೂರ ರಸ್ತೆಯಲ್ಲಿ ಲಕ್ಷಾಂತರ ರೂಪಾಯಿ ಪೈಪ್ ಲೈನ್ ಸಂಗ್ರಹಿಸಿದ್ದಾರೆ.ಯಾರು ಈ ಪೈಪ್ ಸಂಗ್ರಹಿಸಿದ್ದಾರೆ. ಉದ್ದೇಶಿತ ಕಾಮಗಾರಿ ಯಾರು ನಿರ್ವಹಿಸುತ್ತಿದ್ದಾರೆ. ನಗರಸಭೆಯಂದ ಒಂದೇ ಒಂದು ಸಮಾನ್ಯ ಸಭೆ ನಿರ್ವಹಿಸಲಗಿದೆ. ಹಿಂದಿನ ಸಭೆಯಲ್ಲಿ ಕೈಗಾರಿಕೆಗಳಿಗೆ ನೀರು ಪೂರೈಕೆಗೆ ಪೈಲ್ ಲೈನ್ ಅಳವಡಿಸುವ ಬಗ್ಗೆ ಯಾವುದೆ ತೀರ್ಮಾನವಾಗಿಲ್ಲ, ಆದರೂ, ನಗರಸಭೆ ಕಾಮಗಾರಿಕೆಗಳಿಗೆ ಯಾವ ಆಧಾರದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೈಗಾರಿಕೆಗಳಿಗೆ ನೀರು ಪೂರೈಕೆ ಕಾಮಗಾರಿ ಅನೇಕ ಅನುಮಾನಗಳಿಗೆಡೆ ಮಾಡಿದೆ.ಸಾಮನ್ಯ ಸಭೆಯಲ್ಲಿ ಈ ಬಗ್ಗೆ ಯಾವುದೆ ಚರ್ಚೆ ನಡೆಯದೆ ಉದ್ದೇಶಿತ ಕಾಮಗಾರಿ ಯಾರ ಅದೇಶದ ಮೇಲೆ ನಡೆಯುತ್ತಿದ್ದೆ. ಬೇಸಿಗೆಯಲ್ಲಿ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ, ಪ್ರಸ್ತುತ ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತುದೆ. ಇಂಥ ಸ್ಥಿತಿಯಲ್ಲಿ ಕೈಗಾರಿಕೆಗಳಿಗೆ ನೀರು ಪೂರೈಸಿದರೆ ನಾಗರಿಕರಿಗೆ ಕುಡಿಯುವ ನೀರಿನ ಕೊರತೆಯಾದರೆ ಇದಕ್ಕೆ ಯಾರು ಹೊಣೆ?.
ಒಂದು ಮೂಲದನ್ವಯ ಕೈಗಾರಿಕ ಘಟಕಗಳಿಂದ ಹಣ ಸಂಗ್ರಿಹಿಸಿ ಈ ಪೈಪ್ ಲೈನ್ ಹಾಕಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ನಗರಸಭೆ ಸದಸ್ಯರೊಬ್ಬರು ಶಾಮೀಲಾಗಿದ್ದಾರೆ ಎಂದು ಹೇಳಲಾಗಿದೆ. ಕಾಮಗಾರಿ ನಂತರ, ನಗರಸಭೆಯಿಂದ ಬಿಲ್ ಎತ್ತುವಳಿ ಮಾಡುವ ಭಾರಿ ಹಗರಣ ಈ ಯೊಜನೆಯ ಒಳಗೊಂಡಿದೆ ಎಂದು ಸಂಶಯ ವ್ಯಕ್ತ ಪಡಿಸಿದ್ದಾರೆ.
ನಗರಸಭೆಯಲ್ಲಿ ಸಾಮಾನ್ಯ ಸಭೆ ನಿರ್ಣಯವಿಲ್ಲದೆ ಕಾಮಗಾರಿ ಕೈಗೆತ್ತಿಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿಂದೆ ಮುಖ್ಯ ರಸ್ತೆಗಳ ಮಧ್ಯ ಗಿಡ ನೆಡುವ ಯೋಜನೆಯು ಇದೇ ರೀತಿ ಸಾಮಾನ್ಯ ನಿರ್ಣವಿಲ್ಲದೆ ಕೈಗೊಳ್ಳಲಾಗಿತ್ತು. ಬಿಲ್ ಎತ್ತುವಳಿಗೆ ಕಡತ ಮಂಡಿಸಲಾಗಿತ್ತು, ನಾನು ದೂರು ನೀಡಿದನಂತರ ಬಿಲ್ ಎತ್ತುವಳಿ ಸ್ಥಗಿತಗೊಂಡಿದೆ. ನಂತರ ರಸ್ತೆ ಮಧ್ಯ ಕೊಳೆವೆ ಬಾವಿ ಅಳವಡಿಸಲಾಗಿದೆ.ಈ ಕೊಳೆವೆ ಬಾವಿ ಕೊರೆಯುವುದಕ್ಕೆ ಸಂಬಂಧಿಸಿ ಯಾವುದೆ ಪರವಾನಿಗೆ ಪಡೆದಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿಲ್ಲ. ನಗರಸಭೆಯಲ್ಲಿ ಹಗರಣಗಳ ಮೇಲೆ ಹಗರಣಗಳು ನಡೆಯುತ್ತಿವೆ.
ನಗರಸಭೆ ಅಧ್ಯಕ್ಷರು ಮತ್ತು ಸದಸ್ಯೆ ಈ ಪೈಪ್ ಲೈನ್ ಕಾಮಗಾರಿಗೆ ಬಗ್ಗೆ ಆಕ್ಷೇಪಿಸದೆ ಮೌನವಾಗಿರುವುದು ನೋಡಿದರೆ ಇದರಲ್ಲಿ ಸಮಿತಿ ಭಾಗಿಯಾಗಿದೆ ಎಂಬ ಶಂಕೆ ಪೂಡುತ್ತದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಮಗನ ಹರಿಸಿ ತಕ್ಷಣವೆ ಉದ್ದೇಶಿತ ಕಾಮಗಾರಿ ತಡೆದು, ಈ ಹಗರಣದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದ್ದರು.