ಕುಡಿಯುವ ನೀರು ಒದಗಿಸಲು ಒತ್ತಾಯ

ಸಿರವಾರ,ಜೂ.೦೯-
ತಾಲೂಕಿನ ಕಲ್ಲೂರು ಗ್ರಾಮದ ವಾರ್ಡ್ ಸಂಖ್ಯೆ ೨ ರ ಕೃಷ್ಣ ನಗರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರೀಯ ಕಾರ್ಮಿಕರ ಮಾನವ ಹಕ್ಕುಗಳ ಭ್ರಷ್ಟಾಚಾರ ವಿರೋಧಿ ಒಕ್ಕೂಟದ ವತಿಯಿಂದ ತಾಲೂಕು ಪಂಚಾಯತ್ ಇಒ ಅವರಿಗೆ ಒತ್ತಾಯಿಸಲಾಯಿತು.
ಹಲವು ತಿಂಗಳು ಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗ್ರಾ.ಪಂ.ಅಧ್ಯಕ್ಷರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರನ್ನು ಒದಗಿಸಲು ವಿಫಲರಾದಲ್ಲಿ ಸಾರ್ವಜನಿಕರೊಂದಿಗೆ ಗ್ರಾ.ಪಂ.ಕಚೇರಿಯ ಮುಂದೆ ಧರಣಿ ಹೂಡಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ವೇಳೆ ಭ್ರಷ್ಟಾಚಾರ ವಿರೋಧಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಶಿವಪ್ಪ ನಾಯಕ, ಪಂಪಣ್ಣ ಕಲ್ಲೂರು, ತಾಲೂಕು ಪ್ರಧಾನ ಕಾರ್ಯದರ್ಶಿ ಅಡಿವೇಶ ಗಣದಿನ್ನಿ, ಕೆ.ಆರ್.ಎಸ್ ತಾಲೂಕು ಅಧ್ಯಕ್ಷ ವಿಶ್ವನಾಥ ನಾಯಕ, ಯುವ ಹೋರಾಟಗಾರ ಯೂಸೂಫ್ ಸಿರವಾರ ಸೇರಿದಂತೆ ಇತರರು ಇದ್ದರು.