ಕುಡಿಯುವ ನೀರಿಲ್ಲದೆ ಜನರ ಪರದಾಟ

ಚಿಕ್ಕಬಳ್ಳಾಪುರ,ಜೂ.೧೨-ಚಿಕ್ಕಬಳ್ಳಾಪುರ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಸರೆ ಆಗಿರುವ ಜಕ್ಕಲಮಡುಗು ಜಲಾಶಯದ ನೀರು ಕಳೆದ ಒಂದು ತಿಂಗಳಿನಿಂದಲೂ ನಗರದ ಜನತೆಗೆ ಸರಬರಾಜು ಮಾಡಿಲ್ಲ ಈ ಕಾರಣದಿಂದ ನಗರವಾಸಿಗಳಿಗೆ ಹೆಚ್ಚಿನ ತೊಂದರೆ ಆಗಿದ್ದು ಕೂಡಲೇ ಕ್ರಮ ಕೈಗೊಳ್ಳುವಂತೆ ತಾವು ನಗರಸಭೆ ಕಮಿಷನರ್ ಅವರಿಗೆ ತಿಳಿಸಿದರು.
ಅವರು ಈ ಕುರಿತು ಮಾತನಾಡಿ ಚಿಕ್ಕಬಳ್ಳಾಪುರ ನಗರ ೩೧ ಸುಮಾರು ೭೫೦೦೦ ನಗರವಾಸಿಗಳು ವಾಸಿಸುತ್ತಾರೆ ಈ ನಗರವಾಸಿಗಳಿಗೆ ಏಕೈಕ ಆಸರೆ ಎಂದರೆ ಅದು ಜಕ್ಕಲಮಡುಗು ಜಲಾಶಯ ಆಗಿದೆ ಎಂದರು.
ತಾವು ನಗರಸಭೆ ಆಯುಕ್ತರಿಗೆ ಪತ್ರ ಬರೆದು ಕುಡಿಯುವ ನೀರಿನ ವಿಚಾರದಲ್ಲಿ ಆಗಿರುವ ತೊಂದರೆಯನ್ನು ನಿವಾರಿಸಲು ಚುನಾಯಿತ ನಗರಸಭೆ ಸದಸ್ಯರ ತುರ್ತು ಸಮಾವೇಶ ಏರ್ಪಡಿಸಿ ಅಲ್ಲಿ ಚರ್ಚಿಸಬೇಕೆಂದು ಕೋರಿದ್ದೆವು ಆದರೆ ವಿತರಣೆ ಮತ್ತು ಹೊಸ ಬಡಾವಣೆಗಳ ಕುಂದು ಕೊರತೆಗಳನ್ನು ಪರಿಶೀಲನೆ ಮಾಡುವುದರಲ್ಲಿ ಮಗ್ನರಾಗಿದ್ದಾರೆ ಸದಸ್ಯರಿಗೆ ಹಾಗೂ ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೂ ಸಹ ಒಳ್ಳೆಯ ಹೆಸರು ತರುವ ಲಕ್ಷಣ ಆಗಿಲ್ಲ ಇದಕ್ಕೆ ಕಾರಣ ಎಲ್ಲರಿಗೂ ಕುಡಿಯುವ ನೀರು ಬೇಕೇ ಬೇಕು ಎಲ್ಲಕ್ಕಿಂತ ಪ್ರಥಮ ಆದ್ಯತೆ ಕುಡಿಯುವ ನೀರಿಗೆ ನೀಡಬೇಕು ಎಂದು ತಾವು ಒತ್ತಾಯಿಸಿರುವುದಾಗಿ ತಿಳಿಸಿದರು.
ಈ ಕುರಿತು ತಾವು ಜಿಲ್ಲಾಧಿಕಾರಿಗಳಿಗೂ ಸಹ ಪತ್ರ ಮುಖ್ಯಾನ ವಿಷಯ ತಿಳಿಸಿದ್ದು ನಾನು ನಿರಂತರವಾಗಿ ಏಳು ಬಾರಿ ಅಂದರೆ ೩೫ ವರ್ಷಗಳಿಂದ ನಗರಸಭೆ ಸದಸ್ಯನಾಗಿದ್ದೇನೆ ಹಿಂದೆಂದೂ ಕಂಡು ಕೇಳರಿಯದಷ್ಟು ಬಿಸಿಲು ನಗರದಲ್ಲಿ ಇದೆ ನೀರಿನ ಅವಶ್ಯಕತೆ ಹೆಚ್ಚಾಗಿದೆ ಆದಕಾರಣ ಕುಡಿಯುವ ನೀರಿನ ಸರಬರಾಜಿಗೆ ತುರ್ತು ನಗರಸಭೆಯಲ್ಲಿ ಸದಸ್ಯರ ಸಮಾವೇಶ ಕರಿಯಬೇಕೆಂದು ಒತ್ತಾಯಿಸಿರುವುದಾಗಿ ತಿಳಿಸಿದರು.