ಕುಡಿಯುವ ನೀರಿನ ಹೊಸ ಮೋಟಾರ ಖರೀದಿಯಲ್ಲಿ ಹಣ ಲೂಟಿ: ರಫಿ ಆರೋಪ

ಲಿಂಗಸುಗೂರು.ಜು.೧೯- ಪುರಸಭೆಯಲ್ಲಿ ಕುಡಿಯುವ ನೀರಿನ ಹೊಸ ಮೋಟಾರು ಖರೀದಿಯಲ್ಲಿ ಬೊಗಸ ಬಿಲ್ಲು ಸೃಷ್ಟಿಸಿ ಹಣ ಲೂಟಿಮಾಡಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತಾನಾಡಿದ ಪುರಸಭೆ ಉಪಧ್ಯಾಕ್ಷರಾದ ಮಹ್ಮದ್ ರಫಿ ಪುರಸಭೆ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.
ಪುರಸಭೆಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ಹಸನ್ ಜೆ.ಇ. ಕುಡಿಯುವ ನೀರಿನ ಪಂಪ್ ಸೆಟ್ ಮೋಟಾರ್ ಖರೀದಿಯಲ್ಲಿ ಅಕ್ರಮವಾಗಿ ಹಣ ಲೂಟಿಮಾಡಿದ್ದಾರೆ. ಹಳೆಯ ಮೋಟಾರನ್ನು ರಿಪೇರಿ ಮಾಡಿ ಅದಕ್ಕೆ ಬಣ್ಣ ಹಚ್ಚಿ ಹೊಸ ಮೋಟಾರು ಖರೀದಿಮಾಡಿದ್ದೇರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಇದಕ್ಕೆ ಪುರಸಭೆ ಉಪಧ್ಯಾಕ್ಷರು ಹಸನ್ ಜೆ.ಇ .ಭ್ರಷ್ಟ ಅಧಿಕಾರಿ ಎಂದು ಆರೋಪಿಸಿದ್ದಾರೆ.
ಕೊಡಲೇ ಲಿಂಗಸುಗೂರ ಪಟ್ಟಣದ ಜನರಿಗೆ ೪,೫ ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಹಸನ್ ಜೆ.ಇ ವಿರುದ್ಧ ಅನೇಕ ದೂರುಗಳನ್ನು ಸಲ್ಲಿಸಿದ್ದೇವೆ ಹಾಗೂ ಜಿಲ್ಲಾಧಿಕಾರಿಗಳಿಗೆ ಶಾಸಕರ ಗಮನಕ್ಕೆ ತಂದರು ಅಧಿಕಾರಿಗಳ ಬೇಜಾವ್ದಾರಿ ಬೇಕಾ ಬಿಟ್ಟಿ ವರ್ತನೆಯಿಂದಾಗಿ ಅಧಿಕಾರಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಕೂಡಲೇ ಕುಡಿಯುವ ನೀರನ್ನು ೨ ದಿನಕ್ಕೊಮ್ಮೆ ನೀರು ಬಿಡುತ್ತವೆ ಎಂದು ಪತ್ರಕಾ ವರದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರೌಪ ಗ್ಯಾರಂಟಿ, ಬಾಬುರೆಡ್ಡಿ, ಶಿವಪ್ಪ, ಬಸವರಾಜ ಯತ್ಗಲ್ ಉಪಸ್ಥಿತರಿದ್ದರು.