ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿ-ಕರ್ರೆಮ್ಮ

ದೇವದುರ್ಗ.ಮಾ.೦೬- ಕೃಷ್ಣಾನದಿಯ ನೀರಿನ ಲಭ್ಯತೆ ಬಿಟ್ಟು, ಮುಂದೆ ಕೈಗೊಳ್ಳಬೇಕಾದಂತ ಸಮಸ್ಯೆಯ ಆಲೋಚಿಸಿ.ನೆಪ ಹೇಳುವುದು ಬಿಡಿ: ಜನರಿಗೆ ನೀರು ಕೊಡಿ: ಬೇಸಿಗೆ ಮುಗಿಯುವರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಕಥೆ ಹೇಳೋದು ಬಿಡ್ರಿ ಪರಿಹಾರಕ್ಕೆ ಮುಂದಾಗಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಎಚ್ಚರಿಕೆ ನೀಡಿದರು.
ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸೋಮವಾರ ಟಾಸ್ಕ್‌ಪೋರ್ಸ್ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಬೇಸಿಗೆ ಮುಗಿಯುವತನಕ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮವಹಿಸಿ. ಖಾಸಗಿ ಬೋರವೆಲ್ ಮಾಲೀಕರ ಜತೆ ಮೊದಲು ಅಗ್ರಿಮೇಟ್ ಮಾಡಿಕೊಳ್ಳಿ ಇನ್ನೂ ಅಧಿಕಾರಿಗಳು ಇದರಬಗ್ಗೆ ಎಚ್ಚರವಹಿಸಬೇಕು ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೆರೆಗಳಿದ್ದು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕಿ ಕರೆಮ್ಮ ಗೋಪಾಲಕೃಷ್ಣ ಎಚ್ಚರಿಸಿದರು.
ಸಂದರ್ಭದಲ್ಲಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಗ್ರೇಡ್೨ ವೆಂಕಟೇಶ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಶಿರಸ್ತೇದಾರ ಮನೋಹರ್ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.