ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಹೊಕ್ರಾಣಿ ಗ್ರಾಮಸ್ಥರು ಒತ್ತಾಯ

ರಾಯಚೂರು,ನ.೧೬- ಸಿರವಾರ ತಾಲ್ಲೂಕಿನ ಗಣದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಕ್ರಾಣಿ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಹೊಕ್ರಾಣಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ಕುಡಿಯುವ ನೀರಿನ ಮೂಲವಾದ ಹೊಕ್ರಾಣಿ ಕೆರೆಯನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿ ಕೆರೆಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ೩ತಿಂಗಳ ಗಡುವು ಪಡೆದಿತ್ತು ಆದರೆ ೨ ವರ್ಷ ಕಳೆದರೂ ಕಾಮಗಾರಿ ಇದುವರೆಗೆ ಪೂರ್ಣಗೊಂಡಿಲ್ಲ ಎಂದು ದೂರಿದರು.
ಪಂಚಾಯಿತಿಯಿಂದ ತಾತ್ಕಾಲಿಕವಾಗಿ ಖಾಸಗಿ ಮಾಲೀಕರಿಂದ ಕೆರೆ ಬಾಡಿಗೆ ಪಡೆದಿದ್ದಾರೆ.
ಮಾಲೀಕರು ಸರಿಯಾಗಿ ನೀರು ಪೂರೈಸುತ್ತಿಲ್ಲ ಇದರಿಂದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಉಲ್ಬಣವಾಗಿದೆ.ಬೇರೆ ಜಲಮೂಲಗಳು ಇಲ್ಲದ ಕಾರಣ ಗ್ರಾಮಸ್ಥರು ಕೆರೆಯ ಮೇಲೆ ಅವಲಂಬನೆಯಾಗಿದ್ದಾರೆ ಕೂಡಲೇ ಕೆರೆಯನ್ನು ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಲ್. ಪ್ರಭಣ್ಣ,ಹುಲಿಗೆಪ್ಪ,ನರಸಪ್ಪ, ರಾಮಣ್ಣ, ಜಂಬಣ್ಣ,ಅಯ್ಯಾಳಪ್ಪ,ಬಸವಣ್ಣ, ಬಂದನವಾಜ್,ಬಸವರಾಜ ಇದ್ದರು.