ಕುಡಿಯುವ ನೀರಿನ ಸಮಸ್ಯೆ ಕಾಳಾಪುರಕ್ಕೆ ಅಧಿಕಾರಿಗಳ ತಂಡ ಭೇಟಿ.

ಕೊಟ್ಟೂರು, ಮಾ. 26:ತಾಲೂಕಿನ ಕಾಳಾಪುರ ಗ್ರಾಮದಲ್ಲಿ ತಲೆ ದೂರಿರುವ ಕುಡಿಯುವ ನೀರಿನ ಕಮಸ್ಯಗೆ ಬಗ್ಗೆ ನಿನ್ನ ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಎಚ್ಚತ್ತಕೊಂಡ ಅಧಿಕಾರಿಗಳ ತಂಡ ಕಾಳಾಪುರಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದರು.
ತಹಶೀಲ್ದಾರ್ ಜಿ.ಅನಿಲ್ ಕುಮಾರ್,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಲ ಸಿದ್ದಪ್ಪಪೂಜಾರಿ, ಕುಡಿಯುವ ನೀರು ನೈರ್ಮಲ್ಯ ಅಧಿಕಾರಿ ಮರಿಸ್ವಾಮಿ ತಂಡದಲ್ಲಿದ್ದರು. ತಕ್ಷಣ ಖಾಸಗಿಬೋರ್ ಪಡೆದು ನೀರು ಸರಬರಾಜು ಮಾಡಲು ಕ್ರಮಕೈಗೊಂಡರು.