ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕಟ್ಟೆಚ್ಚರ ವಹಿಸಿ: ಶಾಸಕ ಜಿ.ಟಿ.ಡಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.08:- ಮುಂದಿನ ದಿನಗಳಲ್ಲಿ ಎದುರಾಗುವ ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕಟ್ಟೆಚ್ಚರವಹಿಸಬೇಕು. ಜನ-ಜಾನುವಾರುಗಳಿಗೆ ನೀರು,ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಬೇಕು ಶಾಸಕ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ನಗರಸಭೆ,ಪಟ್ಟಣ ಪಂಚಾಯಿತಿ,ಗ್ರಾಪಂ ಅಧಿಕಾರಿಗಳ, ವಿ.ಎ. ಸರ್ವೆಯರ್ ಗಳ ಸಭೆ ನಡೆಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಗ್ರಾಮಗಳಲ್ಲಿ ಜನ-ಜಾನುವಾರಿಗೆ ಕುಡಿ??ಂವ ನೀರು ಸರಬರಾಜಿನಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು
ಅಧಿಕಾರಿಗಳು ಐದಾರು ತಿಂಗಳ ಕಾಲ ಹಳ್ಳಿಗಳಿಗೆ ತಪ್ಪದೆ ಭೇಟಿ ನೀಡಿ ಪರಿಸ್ಥಿತಿ ಅರಿತು ಕೆಲಸ ಮಾಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ . ಬೇಸಿಗೆ ಬರಲಿದ್ದು, ನೀರು ಪೂರೈಕೆಗೆ ಸಂಬಂಧಿಸಿದಂತೆ ಪೂರ್ವ ತಾಕೀತು ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದರು.
ಕ್ಷೇತ್ರದ ಗ್ರಾಮ ಪಂಚಾಯಿತಿವಾರು ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು, ಕುಡಿಯುವ ನೀರಿನ ಪರಿಸ್ಥಿತಿ, ನರೇಗಾ ಸೇರಿ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಸಾಧಿಸಿ. ಮನ್ರೇಗಾ 15ನೇ ಹಣಕಾಸು ಆಯೋಗದ ಅನುದಾನ ರಾಜ್ಯ ಕೇಂದ್ರ ಸರ್ಕಾರದಿಂದ ಬರುವ ಅನುದಾನವನ್ನು ಬಳಸಿಕೊಂಡು ಮೊದಲು ಕುಡಿಯುವ ನೀರಿಗೆ ಆದ್ಯತೆ ಕೊಡಬೇಕು. ಬರಗಾಲ ನಿರ್ವಹಣೆಯೇ ನಿಮಗೆ ಮೊದಲ ಆದ್ಯತೆಯ ಕೆಲಸ ಆಗಬೇಕು. 15ನೇ ಹಣಕಾಸು ಆಯೋಗದಿಂದ ಬರುವ ಅನುದಾನದಲ್ಲಿ ನೀರಿನ ಕಾಮಗಾರಿಗಳಿಗೆ ಒತ್ತು ಕೊಡಬೇಕು ಎಂದು ಸೂಚಿಸಿದರು.
ತಾಲ್ಲೂಕಿನ ಬೀರಿಹುಂಡಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ನಾಲ್ಕು ಕೊಳವೆ ಬಾವಿಯಲ್ಲಿನ ನೀರಿನ ಇಳುವರಿ ಕಡಿಮೆಯಾಗಿದೆ. ಆದ್ದರಿಂದ ಖಾಸಗಿಯವರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅವರಿಗೆ ಸೇರಿದ ಕೊಳವೆ ಬಾವಿಗಳಿಂದ ನೀರು ಪಡೆಯಲಾಗುವುದು. 15 ದಿನಗಳಲ್ಲಿ ಪೈಪ್‍ಲೈನ್ ವಾಡಿ ಪೂರೈಸಲು ಕ್ರಮ ವಹಿಸಲಾಗುವುದು’ ಎಂದು ಅಲ್ಲಿನ ಪಿಡಿಒ ತಿಳಿಸಿದರು.
ಶಾಲೆಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಶಿಕ್ಷಕರು ಆದ್ಯತೆ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಶಾಲಾ ಕಾಂಪೌಂಡ್, ಆಟದ ಮೈದಾನ ಹಾಗೂ ಸ್ಮಶಾನ ನಿರ್ವಾಣಕ್ಕೆ ಆದ್ಯತೆ ನೀಡಬೇಕು. ಆಶ್ರಯ ಯೋಜನೆಗೆ ಸಂಬಂಧಿಸಿದಂತೆ ಆಶಾ ಗ್ರಾಮಗಳಲ್ಲೇ ಸರ್ಕಾರಿ ಜಾಗವನ್ನು ಕೂಡಲೇ ಗುರುತಿಸಬೇಕು' ಸೂಚಿಸಿದರು. ಪಿಡಿಒಗಳಿಗೆ ಪಾಠ: ಪಿಡಿಒಗಳು ಇರೋ ಕೆಲವು ನಾಯಕರನ್ನು ಹಚ್ಚಿಕೊಳ್ಳುವುದಲ್ಲ; ಅಲ್ಲಿನ ಜನರನ್ನು ಹಚ್ಚಿಕೊಳ್ಳಬೇಕು. ಕೆಲವರನ್ನು ಓಲೈಸಿ ಯಾರದೋ ಕೆಂಗಣ್ಣಿಗೆ ಗುರಿಯಾಗಬೇಕೇ?’ ಎಂದು ಪಾಠ ಮಾಡಿದರು. ಪಿಡಿಒಗಳನ್ನು ನಾನೇನೂ ವರ್ಗಾವಣೆ ವಾಡಿಸುತ್ತಿಲ್ಲ. ಸರ್ಕಾರವೇ ದಿಢೀರನೆ ವರ್ಗಾವಣೆ ಮಾಡುತ್ತಿಲ್ಲ. ನಮ್ಮ ಕ್ಷೇತ್ರದಲ್ಲಿರುವವರನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲು ಅವಕಾಶ ಕೊಡಬಾರದು. ಅಧಿಕಾರಿಗಳು ಕೂಡ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಚೆನ್ನಾಗಿ ಕೆಲಸ ಮಾಡುತ್ತಿರುವವರನ್ನು ನಮ್ಮಲ್ಲೇ ಉಳಿಸಿಕೊಳ್ಳಬೇಕು' ಎಂದರು. ನಮ್ಮ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರಿನಂತೆ ಒಂದು ಗುಂಟೆಗೂ ಬಹಳ ಬೆಲೆ ಬಂದಿದೆ. ಹೀಗಾಗಿ ಭೂಮಿಯನ್ನು ಒಂದು ಗುಂಟೆಯನ್ನೂ ಕೊಡುವುದಕ್ಕೆ ಬಯಸುವುದಿಲ್ಲ. ಕಂದಾಯ ದಾಖಲೆ?ಯೇ ಶಾಶ್ವತ ದಾಖಲೆಯಾಗಿದೆ ಅದನ್ನು ಪರಿಗಣಿಸಿ ಜಾಗ ಪಡೆದುಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ:
ಕ್ಷೇತ್ರದ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ವಾಣಕ್ಕೆ ಅಗತ್ಯ ಇರುವ ನಿವೇಶನ ಮಂಜೂರಾತಿಗೆ ಪ್ರಸ್ತಾಪ ಸಲ್ಲಿಸಬೇಕು. ಅಧಿವೇಶನದ ವೇಳೆ ಸಚಿವರನ್ನು ಭೇಟಿ ವಾಡಿ ಮಂಜೂರು ವಾಡಿಸುವ ಜತೆಗೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ವಾಡಿಸಲು ಪ್ರಯತ್ನ ನಡೆಸಲಾಗುತ್ತದೆ. ತಕ್ಷಣವೇ ಇಲಾಖೆಯ ಮೂಲಕ ಸರ್ಕಾರಕ್ಕೆ ಪಟ್ಟಿ ಸಮೇತ ಪ್ರಸ್ತಾಪವನ್ನು ಸಲ್ಲಿಸುವಂತೆ ಶಿಶು ಯೋಜನಾಧಿಕಾರಿಗೆ ಸೂಚಿಸಿದರು.
ನಿರ್ವಹಣೆಗೆ ಕ್ರಮ ವಹಿಸಿ:
`ಸರ್ಕಾರಿ ಶಾಲಾ ಶೌಚಾಲಯಗಳ ನಿರ್ವಹಣೆಯನ್ನು ವಾರದಲ್ಲಿ ಒಮ್ಮೆಯಾದರೂ ಗ್ರಾಮ ಪಂಚಾಯಿತಿಯಿಂದ ಮಾಡಬೇಕು. ಶಿಕ್ಷಕರು ಈ ವಿಷಯದಲ್ಲಿ ಕ್ರಮ ವಹಿಸುತ್ತಿಲ್ಲ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಲವಾಲ, ಗುಂಗ್ರಾಲ್ ಛತ್ರ, ಆನಂದೂರು, ನಾಗವಾಲ, ಜಯಪುರ, ದೊಡ್ಡ ಮಾರನಗೌಡನಹಳ್ಳಿ ಮೊದಲಾದ ಪಂಚಾಯಿತಿಯಲ್ಲಿ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು. ಒಂದೆರಡು ಹಳ್ಳಿ ಬಿಟ್ಟರೆ ಉಳಿದ ಗ್ರಾಮದಲ್ಲಿ ಯಾವುದೇ ಸಮಸ್ಯೆ ಇಲ್ಲ.ಜಲಜೀವನ್‍ಮಿಷನ್ ಯೋಜನೆಯಡಿ ಮನೆ ಮನೆಗೆ ಪೈಪ್ ಲೈನ್ ಎಳೆದು ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಇಒ ಹೇಳಿದರು.
ಸರ್ಕಾರಿ ಜಾಗ ಗುರುತಿಸಿ:
ಭೂಮಿಯ ಬೆಲೆ ಜಾಸ್ತಿಯಾಗುತ್ತಿರುವುದರಿಂದ ಸರ್ಕಾರಿ ಭೂಮಿಯನ್ನು ಗುರುತಿಸಿ ಮೀಸಲಿಡಬೇಕು. ಮುಂದೆ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡ, ಆಸ್ಪತ್ರೆ, ವಸತಿ ಬಡಾವಣೆಗಳಿಗೆ ಭೂಮಿ ಕೊರತೆ ಎದುರಾಗುವ ಕಾರಣ ಸರ್ಕಾರಿ ಜಮೀನು ಎಲ್ಲೆಲ್ಲಿದೆ ಎಂಬುದನ್ನು ಗುರುತಿಸಿ ಬೌಂಡರಿ ನಿಗದಿಪಡಿಸಬೇಕು. ವಸತಿ ಬಡಾವಣೆಗೆ ಪ್ರಸ್ತಾಪ ಸಲ್ಲಿಸಿರುವ ಗ್ರಾಪಂಗಳಿಗೆ ಹಸ್ತಾಂತರ ಮಾಡಬೇಕು ಎಂದು ತಹಸಿಲ್ದಾರ್‍ಗೆ ಸೂಚಿಸಿದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಘನತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಾಣ ಮಾಡಬೇಕು. ಚಾಮುಂಡಿಬೆಟ್ಟದಲ್ಲಿ ಸ್ವಚ್ಛತೆ ಸರಿಯಾಗಿ ಮಾಡಬೇಕು. ರಸ್ತೆಗೆ ಕಸ ತಂದು ಎಸೆಯುವ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮಜರುಗಿಸಬೇಕು ಎಂದು ಹೇಳಿದರು.ತಾಪಂ ಆಡಳಿತಾಧಿಕಾರಿ ಸವಿತ, ತಹಸಿಲ್ದಾರ್ ಮಹೇಶ್,ತಾಲ್ಲೂಕು ಪಂಚಾಯಿತಿ ಇಒ ಗಿರಿಧರ್,ಎಡಿಎಲ್‍ಆರ್ ಚಿಕ್ಕಣ್ಣ ಸಭೆಯಲ್ಲಿ ಹಾಜರಿದ್ದರು.