ಕುಡಿಯುವ ನೀರಿನ ಸಮಸ್ಯೆ ಉಲ್ಬಣ ವಿವಿಧ ವಾಡ೯ಗಳ ಮಹಿಳೆ ರಿಂದ ಮುದಗಲ್ಲ ಪುರಸಭೆ ಮುತ್ತಿಗೆ

ಮುದಗಲ್ಲ : ಬೇಸಿಗೆ ಆರಂಭದ ಹೊತ್ತಿನಲ್ಲೇ ಲಿಂಗಸೂರು ತಾಲ್ಲೂಕಿನ ಮುದಗಲ್ಲ ಪಟ್ಟಣದ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.

ವಾರ್ಡ್ ಸಂಖ್ಯೆ 9 17 18 ನೇ ವಾಡ೯ನ ರಲ್ಲಿ ಉದ್ಭವಿಸಿದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ ಮುದಗಲ್ಲ ಪುರಸಭೆ ಆಡಳಿತ ವಿಫಲವಾಗಿದೆ.

ಜನತೆಯ ಸಂಕಷ್ಟದ ಬಗ್ಗೆ ಅಕಾರಿಗಳಿಗೆ ಕಿಂಚಿತ್ತೂ ಗಮನವೇ ಇಲ್ಲ.
ಸಮಸ್ಯೆಗಳನ್ನು ಬಗೆಹರಿಸಿ, ಜನತೆಗೆ ಸ್ಪಂದಿಸಬೇಕು ಎಂಬ ಕಾಳಜಿ ಇಲ್ಲ ಎಂದು ಮಹಿಳೆಯರು ಆಪಾದಿಸಿದರು.

ಬೆಸುಗೆ ಯಲ್ಲಿ ಕಳೆದ ಎರಡು ತಿಂಗಳಿಂದ ನೀರಿನ ಸಮಸ್ಯೆ ಇದೆ. ಇದು ಗೊತ್ತಿದ್ದೂ ಸರಿಪಡಿಸುವ ನಿಟ್ಟಿನಲ್ಲಿ ನಿರ್ಲಕ್ಷ್ಯ ಮಾಡಿರುವುದು ಖಂಡನೀಯ.
ನೀರಿನ ಸಮಸ್ಯೆ ಬಿಗಡಾಯಿಸಿವೆ ಎಂದು ಆಪಾದಿಸಿದರು.

ಬಿಸಿಲನ್ನು ಲೆಕ್ಕಿಸದೇ ನೀರಿಗೋಸ್ಕರ ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದೇವೆ ಎಂದು ದೂರಿದರು.

ಪುರಸಭೆ ಕಂದಾಯ ವಿಭಾಗದ ಅಧಿಕಾರಿಯಾದ ಜಸ್ಸ್ ಪಾಲ್ ಸಿಂಗ್ ‌ಹಾಗೂ ನೀರಿನ ವಿಭಾಗದ ಅಧಿಕಾರಿಯಾದ ಮಹಾಲಿಂಗರಾಯ ಅವರಿಗೆ ಮಹಿಳೆಯರು ಆದಷ್ಟು
ನೀರಿನ ಸಮಸ್ಯೆ ಬಗೆಹರಿಸಿ ಎಂದು ಹೇಳಿದರು..