ಕುಡಿಯುವ ನೀರಿನ ಸಂಪರ್ಕಕ್ಕಾಗಿ ಪ್ರತಿಭಟನೆ

ಜೂನ್ .ಜೂ.೪; ಚಿತ್ರದುರ್ಗ ನಗರದ ದೊಡ್ಡಪೇಟೆ, ಮೈಸೂರ್ ಕೆಫೆ ಮುಂಭಾಗ  ಕುಡಿಯುವ ನೀರಿನ ಪೈಪ್ ಸಂಪರ್ಕ ವಿಚಾರವಾಗಿ ಕಂಟ್ರಾಕ್ಟರ್ ಮತ್ತು ಸಾರ್ವಜನಿಕರ ನಡುವೆ ಜಟಾಪಟಿ ನಡೆಯಿತು. ಕಂಟ್ರಾಕ್ಟರ್ ಪ್ರಸನ್ನ ರವರು ಸರ್ವರಿಗೂ ಒಂದೇ ಮಾದರಿ ನೀರಿನ ಸಂಪರ್ಕ ಕೊಡುವ ಬದಲು ಕೆಲವ ಬಳಿ ಹಣ ಪಡೆದುಕೊಂಡೋ ಅಥವಾ ದೊಡ್ಡವರ ಶಿಫಾರಸ್ಸಿಗೋ ಹೆಚ್ಚು ಅನುಕೂಲವಾಗುವ ರೀತಿ ಪೈಪ್ ಸಂಪರ್ಕ ಕೊಟ್ಟಿದ್ದಾರೆ. ಅದನ್ನು ಕೂಡಲೇ ತೆರವು ಮಾಡಿ ಸರ್ವರಿಗೂ ಒಂದೇ ಮಾದರಿಯ ಪೈಪ್ ಸಂಪರ್ಕ ಕೊಡಬೇಕೆಂದು ದೊಡ್ಡಪೇಟೆಯ ನಿವಾಸಿಗಳು ಕಂಟ್ರಾಕ್ಟರ್ ಪ್ರಸನ್ನ ಜೊತೆ ಮಾತಿನ ಚಕಮಕಿ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಂಜಿನಿಯರ್ ಸ್ಥಳಿಯ ಒತ್ತಡಕ್ಕೆ ಮಣಿದು ಈಗಾಗಲೇ ಸಂಪರ್ಕ ನೀಡಿದ್ದ ಪೈಪ್‌ಲೈನ್ ಸಂಪರ್ಕವನ್ನು ಸ್ಥಳದಲ್ಲಿಯೇ ತೆರವು ಮಾಡಿ. ಸರ್ವರಿಗೂ ಒಂದೇ ಮಾದರಿಯ ನೀರಿನ ಸಂಪರ್ಕ ಕೊಡುವುದಾಗಿ ಭರವಸೆ ನೀಡಿದ ನಂತರ ಸ್ಥಳೀಯರು ಸಮಾಧಾನಗೊಂಡರು.