
ಅಳ್ನಾವರ, ಆ9: ಕೆ. ಎಲ್. ಎಸ್. ವಿ. ಡಿ. ಐ. ಟಿ. ಹಳಿಯಾಳದ ಸಿವಿಲ್ ವಿದ್ಯಾರ್ಥಿಗಳು ಅಳ್ನಾವರದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಕ್ಕೆ ಭೇಟಿ ನೀಡಿ, ಕುಡಿಯುವ ನೀರನ್ನು ಶುದ್ದಿಕರಿಸಿ ಆಮ್ಲಜನಕ ಸೇರಿಸುವ ವಿಧಾನದ ಕುರಿತು ಮಾಹಿತಿ ಪಡೆದುಕೊಂಡರು. ಘಟಕದ ಅಭಿಯಂತರರಾದ ಶ್ರೀ. ಸುನೀಲ್ ಅವರು ನೀರನ್ನು ಶುದ್ದಿಕರಿಸಲು ಇರುವ ಪ್ರಮಾಣಿತ ಕಾರ್ಯ ವಿಧಾನವನ್ನು ಸವಿಸ್ತಾರವಾಗಿ ವಿವರಿಸಿದರು.
ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಹೆಚ್ಚಿಸಲು ಇಂತಹ ಕ್ಷೇತ್ರ ಭೇಟಿ ಯನ್ನು ಹಮ್ಮಿಕೊಲಾಗಿದೆ ಎಂದು ಪ್ರಾಚಾರ್ಯರಾದ ಡಾ. ವಿ. ಎ. ಕುಲಕರ್ಣಿ ಅವರು ಹೇಳಿದರು. ನೀರಿನ ಶುದ್ದಿಕರಣ ಹಾಗೂ ಸಮರ್ಪಕ ನಿರ್ವಹಣೆ ಕುರಿತು ಸಿವಿಲ್ ಅಭಿಯಂತರರು ಮಾಹಿತಿ ಹೊಂದುವುದು ಅತ್ಯವಶ್ಯಕ ವಾಗಿದ್ದು, ಈ ನಿಟ್ಟಿನಲ್ಲಿ ಅಳ್ನಾವರ ನೀರುಶುದ್ದಿಕರಣ ಘಟಕಕ್ಕೆ ತಮ್ಮ ವಿದ್ಯಾರ್ಥಿಗಳು ಭೇಟಿ ನೀಡಿದರು ಎಂದು ವಿಭಾಗ ಮುಖ್ಯಸ್ಥರಾದ ಪೆÇ್ರ. ಹರ್ಷ ಜಾಧವ ಹೇಳಿದರು.
ನಾಲ್ಕನೇ ಸೆಮಿಸ್ಟರ್ ನ ವಿದ್ಯಾರ್ಥಿಗಳು ಪೆÇ್ರ. ಎಸ್. ಜಿ. ಹಿರೇಮಠ್ ಮತ್ತು ಪೆÇ್ರ. ರಾಕೇಶ್ ಪಾಟೀಲ್ ಅವರ ನೇತೃತ್ವದಲ್ಲಿ ಪಾಲ್ಗೊಂಡಿದ್ದರು.