ಕುಡಿಯುವ ನೀರಿನ ಮೋಟಾರು ದುರಸ್ತಿಗೆ ಒತ್ತಾಯ

ಅರಕೇರಾ,ಏ.೧೭-ಕ್ಯಾದಿಗ್ಗೇರಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಗ್ರಾಮಗಳು ಹಾಗೂ ವಾರ್ಡುಗಳಲ್ಲಿ ಬೇಸಿಗೆ ಕಾಲವಾಗಿದ್ದರಿಂದ ಸಾರ್ವಜನಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗ್ರಾಮಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಪದ್ಮಶ್ರೀ ಕ್ರಿಷ್ಟಪ್ಪನಾಯಕ ಮಾಲಿಪಾಟೀಲ್ ತಿಳಿಸಿದರು.
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿಬರುವ ಗ್ರಾಮಗಳಲ್ಲಿ ಬೇಸಿಗೆ ದಿನವಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರತಿಯೊಬ್ಬ ಸದಸ್ಯರು ಕೂಡ ಗಮನಹರಿಸಿ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿದ್ದು ಕಳೆದ ಮೂರು ನಾಲ್ಕು ದಿವಸಗಳಿಂದ ಮಲ್ಲಾಪೂರ ತಾಂಡದಲ್ಲಿ ಕುಡಿಯುವ ನೀರಿನ ಮೋಟಾರು ದುರಸ್ತಿ ಇದ್ದು ಅದನ್ನು ರಿಪೇರಿ ಮಾಡಿಸಿ ಸ್ವತಹ ಗ್ರಾಮಪಂಚಾಯತಿ ಅಧ್ಯಕ್ಷರ ಪತಿಯಾದ ಕ್ರೀಷ್ಟಪ್ಪನಾಯಕ ಮಾಲಿಪಾಟೀಲ್‌ರವರು ಗ್ರಾಮಸ್ಥರ ಸಹಕಾರದೊಂದಿಗೆ ಕೊಳವೆ ಬಾವಿಗೆ ದುರಸ್ತಿಯಾ ಮೋಟಾರು ಇಳಿಸಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಅನುಕೂಲಮಾಡಿಕೊಟ್ಟಿದ್ದಾರೆ.
ಸದರಿ ಬೇಸಿಗೆ ಕಾಲ ದಿನೇ ದಿನೇ ಬೇಸಿಗೆ ತಾಪಮಾನ ಹೆಚ್ಚಾಗುತ್ತಿದ್ದು ಜನರಿಗೆ ಕುಡಿಯುವ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರರಿನ ಸಲುವಾಗಿ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆವುಂಟಾಗದಂತೆ ನೋಡಿಕೊಳ್ಳುವದು ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರು ಅಭಿವೃದ್ದಿ ಅಧಿಕಾರಿಗಳ ಕರ್ತವ್ಯವಾಗಿದೆ. ಅಧ್ಯಕ್ಷರು ಮತ್ತು ಸದಸ್ಯರು ಇವರಂತೆ ಕೆಲಸಮಾಡಿದ್ದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದೆಂತೆ ನೋಡಿಕೊಳ್ಳಬಹುದೆಂದು ಅಂಬೊಣ.