ಕುಡಿಯುವ ನೀರಿನ ಮಾರ್ದನಿ : ತನಿಖೆಗೆ ದೊಡ್ಡನಗೌಡ ಆಗ್ರಹ

ಲಿಂಗಸುಗೂರು.ಜು.೨೮- ಪುರಸಭೆ ವ್ಯಾಪ್ತಿಯಲ್ಲಿ ನಾಗರಿಕರಿಗೆ ಜನರಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಜನರು ವಾರ್ಡ್ ನ ಸದಸ್ಯರಿಗೆ ಚೀಮಾರಿ ಹಾಕುತ್ತಿದ್ದಾರೆ. ಇದರಿಂದ ಜನತೆ ಉತ್ತರ ಕೊಡಲು ನಾಚಿಕೆಯಾಗುತ್ತದೆ ನಿಮ್ಮ ಆಡಳಿತದಲ್ಲಿ ಬೇಜವಾಬ್ದಾರಿ ಅಧಿಕಾರಿಗಳು ಇರುವುದರಿಂದ ನಾಗರಿಕರಿಗೆ ನೀರಿನ ಸಮಸ್ಯೆಯಾಗಿದೆ ಇಂತಹ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂಬುದು ಸದಸ್ಯರು ಒತ್ತಾಯಿಸಿದರು.
ಲಿಂಗಸುಗೂರು ಪುರಸಭೆ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಬಿಲ್ಚಿಂಗ್ ಆಲ್ಂ ಪೌಡರ್ ಖರೀದಿ ಹೆಸರಿನಲ್ಲಿ ಲಕ್ಷಾಂತರ ಹಣ ಖರ್ಚಾಗಿದೆ ಆದರೂ ಜನರಿಗೆ ಕುಡಿಯಲು ನೀರು ಕೊಡಲಾಗಲಿಲ್ಲ ಪ್ರತಿ ವರ್ಷ ತಿಂಗಳ ತಿಂಗಳು ಬಿಲ್ಚಿಂಗ್ ಆಲ್ಂ ಪೌಡರ್ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಅನುದಾನ ಖರ್ಚು ಮಾಡುವ ಮೂಲಕ ಜನಸಾಮಾನ್ಯರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ ಕುಡಿಯುವ ನೀರಿನ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಪ್ರಯತ್ನ ನಡೆಯುತ್ತಿದೆ ನೀರಿನ ರಾಜಕಾರಣ ನಿಲ್ಲಿಸಿ ಎಂದು ಪುರಸಭೆ ಸದಸ್ಯ ದೊಡ್ಡನಗೌಡ ಪಾಟೀಲ್ ಹೊಸಮನಿ ಇವರು ಪುರಸಭೆ ಮುಖ್ಯಾಧಿಕಾರಿ ಗಳಿಗೆ ತರಾಟೆ ತೆಗೆದುಕೊಳ್ಳುವ ಮೂಲಕ ಮಾರ್ದನಿಸಿದರು.
ಅಧಿಕಾರಿಗಳು ಹಣ ಖರ್ಚು ಮಾಡುವಾಗ ಪುರಸಭೆ ಸದಸ್ಯರ ಅಭಿಪ್ರಾಯ ಕೇಳುವುದಿಲ್ಲ ಸಮಸ್ಯೆಗಳ ಬಂದಾಗ ಮಾತ್ರ ತುರ್ತು ಸಭೆ ನಡೆಸುತ್ತಾರೆ ಕಳೆದ ಮೂರು ವರ್ಷಗಳಿಂದ ಇದೆ ರೀತಿ ನೀರಿನ ಸಮಸ್ಯೆ ಉಂಟಾಗಿದ್ದರು ಎಚ್ಚೆತ್ತುಕೊಳ್ಳದ ಪುರಸಭೆ ಅಧಿಕಾರಿಗಳು ಯಾವುದೇ ತುರ್ತು ಕ್ರಮ ಕೈಗೊಳ್ಳದೆ ಅಧಿಕಾರಿಗಳಿಗೆ ಜನರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸದಸ್ಯೆರು ಹಿಡಿಶಾಪ ಹಾಕಿದರು.
ಕೇವಲ ಮೂರು ತಿಂಗಳಲ್ಲಿ ಲಕ್ಷಾಂತರ ಹಣ ಖರ್ಚು ಪುರಸಭೆಯ ಕಾರ್ಯಾಲಯದಲ್ಲಿ ಬುಧವಾರ ನಡೆದ ತುರ್ತು ಸಭೆ ನಡೆಸಿ ಕೆರೆ ನೀರಿನ ಬಗ್ಗೆ ಮಾಹಿತಿ ನೀಡಲು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ರೀತಿಯಲ್ಲಿ ಅಧಿಕಾರಿಗಳು ತಡವಡಿಸಿದರು ಇದರಿಂದ ವಾರ್ಡ್‌ನ ಸದಸ್ಯರಾದ ರುದ್ರಪ್ಪ ಭ್ಯಾಗಿ ಸೋಮನಗೌಡ ಪಾಟೀಲ್ ರೌಪ್ ಗ್ಯಾರಂಟಿ ಇವರುಗಳು ಸೇರಿದಂತೆ ಇತರ ಸದಸ್ಯರು ಜನರಿಗೆ ಕುಡಿಯಲು ನೀರು ಕೊಡಲಾಗಲಿಲ್ಲ ಅಂದರೆ ಎಲ್ಲಾದರೂ ವರ್ಗಾವಣೆ ಮಾಡಿಕೊಂಡು ಹೋಗಿ ಎಂದು ಅಧಿಕಾರಿಗಳ ವಿರುದ್ಧ ರೆಗಾಡಿದರು
ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನಾಗರಿಕರಿಗೆ ಕುಡಿಯುವ ನೀರು ಪೂರೈಕೆಗೆ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಗಬೇಕು ಎಂದು ಎಲ್ಲಾ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು .
ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಇವರು ಎಲ್ಲಾ ಸದಸ್ಯರ ಮಾತಿಗೆ ಮನ್ನಣೆ ನೀಡಿ ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಜೋತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಕೊನೆಗೂ ಸದಸ್ಯೆರ ಒತ್ತಾಯಕ್ಕೆ ಮಣಿದ ಪುರಸಭೆ ಅಧಿಕಾರಿಗಳು ಪಟ್ಟಣದ ಜನತೆಗೆ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಗುವ ಮೂಲಕ ಮುಂದಿನ ದಿನಗಳಲ್ಲಿ ಬರುವ ತೊಂದರೆಗಳನ್ನು ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ . ಎಂದು ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಇವರು ಎಲ್ಲಾ ಸದಸ್ಯರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮೌಲಾಸಾಬ್, ಗೌಳಿ ಮುದುಕಪ್ಪ ನಾಯಕ ,ಯಮನಪ್ಪ, ದೇಗುಲಮರಡಿ ಮುತ್ತು, ಮೇಟಿ ಮುಖಂಡರಾದ ಶರಣಪ್ಪ ಕರಡಕಲ್, ಅಬ್ದುಲ್ಲಾ ಬೇಕರಿ, ಶಿವಪ್ಪಾ ನಾಯಕ, ಬಸವರಾಜ ಯತಗಲ್ ಹಾಗೂ ಪುರಸಭೆ ಆಡಳಿತ ವರ್ಗದ ನೌಕರರು ಸಭೆಯಲ್ಲಿ ಭಾಗವಹಿಸಿದ್ದರು.