ಕುಡಿಯುವ ನೀರಿನ ತೊಂದರೆ : ಸಾರ್ವಜನಿಕರಲ್ಲಿ ಮನವಿ- ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ

ಲಿಂಗಸುಗೂರು.ಜು.೨೮- ಪುರಸಭೆ ವ್ಯಾಪ್ತಿಯಲ್ಲಿ ಬರುವ ನಗರದ ನಾಗರಿಕರಿಗೆ ಸಾರ್ವಜನಿಕರಿಗೆ ಈಗಾಗಲೇ ಕುಡಿಯುವ ನೀರಿನ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ ಇದರಿಂದಾಗಿ ಪುರಸಭೆ ಆಡಳಿತ ಮಂಡಳಿ ಪರವಾಗಿ ನೈತಿಕ ಜವಾಬ್ದಾರಿಯನ್ನು ಹೊತ್ತು ಸಾರ್ವಜನಿಕರಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದರು ನಾಗರಿಕರು ತಾಳ್ಮೆಯಿಂದ ಸಹಕರಿಸಿದ್ದಿರಿ ಇದರಿಂದ ನಾನು ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಇವರು ನಾಗರಿಕರಿಗೆ ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
ಐಸಿಸಿ ಸಭೆಯಲ್ಲಿ ಲಿಂಗಸುಗೂರು ಶಾಸಕ ಡಿಎಸ್ ಹೂಲಗೇರಿ ಇವರು ಲಿಂಗಸುಗೂರು ಪಟ್ಟಣದ ಕುಡಿಯುವ ನೀರಿನ ಕೆರೆಗೆ ನೀರು ಇಲ್ಲದೆ ಬರಿದಾಗಿದೆ ಇದರಿಂದಾಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಜನರಿಗೆ ಕುಡಿಯಲು ನೀರಿಲ್ಲ ಕೂಡಲೇ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಗೆ ಮುಂದಾಗಬೇಕು ಎಂದು ೨೬ ೦೭ ೨೦೨೨ರಂದು ಮನವಿ ಮಾಡಿದ್ದಾರೆ.
ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣದಿಂದ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವಿಳಂಬಕ್ಕೆ ಕಾರಣವಾಗಿದೆ ಎಂದು ಪುರಸಭೆ ಅಧ್ಯಕ್ಷೆ ಸುನೀತಾ ಕೆಂಭಾವಿ ಇವರು ನಾಗರಿಕರಿಗೆ ವಿಜ್ಞಾಪನೆ ಮಾಡಿದ್ದಾರೆ.
ಇದೆ ತಿಂಗಳು ೨೯ಅಥವಾ ೩೦ರಂದು ಕಾಲುವೆ ಮೂಲಕ ಪಟ್ಟಣದ ಕುಡಿಯುವ ನೀರಿನ ಕೆರೆಗೆ ನೀರು ಹರಿಸಲಾಗುವುದು ನದಿಯಿಂದ ಹೊಸ ದಾಗಿ ಬಂದ ನೀರು ಕಲುಷಿತಗೊಂಡ ನೀರಾಗಿರುವದರಿಂದ ತಕ್ಷಣಕ್ಕೆ ಈ ನೀರನ್ನು ಕುಡಿಯಬಾರದು ಏಕೆಂದರೆ ಈ ಹೊಸದಾಗಿ ನೀರಿನಿಂದ ಆಗುವ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಹಾಗೂ ಕಾಯಿಸಿ ಸೊಸಿ ಕುಡಿಯಬೇಕು ಎಂದು ಪುರಸಭೆ ಆಡಳಿತ ಮಂಡಳಿ ಪರವಾಗಿ ಪುರಸಭೆಗೆ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.