
ಸಿರವಾರ,ಆ.೦೮-
ತಾಲೂಕಿನ ಚಾಗಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಡಿಸ್ಟ್ರಿಬ್ಯೂಟರಿ ೮೯ ರ ಮೂಲಕ ಚಾಗಭಾವಿ ಗ್ರಾಮದ ಕುಡಿಯುವ ನೀರಿನ ಕೆರೆ, ಕಾಲುವೆ ೯೦ ಮೂಲಕ ಜಾಲಾಪೂರ ಕ್ಯಾಂಪಿನ ಕುಡಿಯುವ ನೀರಿನ ಕೆರೆ, ಕಾಲುವೆ ನಂಬರ್ ೯೧ ಶಾಸ್ತ್ರಿ ಕ್ಯಾಂಪ್ ಮತ್ತು ಭಾಗ್ಯನಗರ ಕ್ಯಾಂಪ್ ನ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸುವ ಮೂಲಕ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಚಾಗಭಾವಿ ಇವರ ಮುಖಾಂತರ ಕಾರ್ಯ ಪಾಲಕ ಅಭಿಯಂತರರು ನೀರಾವರಿ ಇಲಾಖೆ ಸಿರವಾರ ನಂಬರ್-೪, ಇವರಿಗೆ ಬರೆದ ಮನವಿ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು ಕಲಬುರಗಿ ವಿಭಾಗ ಇವರ ಆದೇಶ ಪ್ರಕಾರ ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕುಡಿಯುವ ನೀರಿನ ಕೆರೆಗಳಿಗೆ ನೀರು ಹರಿಸುವಂತೆ ಆದೇಶಿಸಿದ್ದು ಅದರಂತೆ ಈ ಮೇಲೆ ಉಲ್ಲೇಖಿಸಿದ ಸಿರವಾರ ತಾಲೂಕಿನ ಚಾಗಭಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ದಾಹ ತಿರಿಸಬೇಕೆಂದು ವಿನಂತಿಸಲಾಯಿತು.