
ತಾಳಿಕೋಟೆ:ಆ.10: ಶುದ್ದ ಕುಡಿಯುವ ನೀರಿನ ಕಾಮಗಾರಿ ಗುಣಮಟ್ಟದಿಂದ ಕೂಡಿಸಲಿ ರಸ್ತೆಗಳು ಹಾಳಾಗದಂತೆ ಗುತ್ತಿಗೆದಾರರ ಏಚ್ಚರವಹಿಸಿ ಕಾಮಗಾರಿ ನಿರ್ವಹಿಸಬೇಕೆಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಿ) ಅವರು ಹೇಳಿದರು.
ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ 2021-22ನೇ ಸಾಲಿನ ಜಲಜೀವನ ಮಷನ್ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ ಯೋಜನೆಯ ಭೂಮಿಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡುತ್ತಿದ್ದ ಅವರು ಜೆಜೆಎಂ ಯೋಜನೆ ಜನರಿಗೆ ಉತ್ತಮ ಶುದ್ದ ಕುಡಿಯುವ ನೀರು ಒದಗಿಸುವಂತಹ ಯೋಜನೆಯಾಗಿದೆ ಈ ಕಾಮಗಾರಿ ಮಾಡುವ ಬರದಲ್ಲಿ ಕೆಲವೆಡೆ ರಸ್ತೆಗಳನ್ನು ಹೆಚ್ಚಿಗೆ ಅಗೆದು ರಸ್ತೆಗಳನ್ನು ಹಾಳು ಮಾಡಿರುವದು ನಧುರಿಗೆ ಬಂದಿದೆ ಏಷ್ಟು ರಸ್ತೆ ಹಾಳು ಮಾಡಿದ್ದಾರೆ ಅವರಿಂದ ಮರು ರಸ್ತೆ ನಿರ್ಮಾಣ ಮಾಡಲು ಸೂಚನೆಯನ್ನು ಕೊಟ್ಟಿದ್ದೇನೆ ಸದರಿ ಕಾಮಗಾರಿ ಮಾಡುವಾಗ ಗುತ್ತಿಗೆದಾರರ ರಸ್ತೆಯ ಮಗ್ಗಲು ಅಗೆದು ಪೈಪಲೈನ್ ಕಾರ್ಯವನ್ನು ನಿರ್ವಹಿಸಬೇಕು ಈ ಕಾಮಗಾರಿ ಮಾಡುವ ಸಮಯದಲ್ಲಿ ಅಧಿಕಾರಿಗಳು ಜಾಗೆಯಲ್ಲಿ ಇದ್ದು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ರಾಜುಗೌಡರು ನಾನು ಶಾಸಕನಾಗುವ ಮುಂಚೆ ಯಾವ ರೀತಿ ಇದ್ದೆ ಈಗಲೂ ಅದೇ ರೀತಿ ಇದ್ದೇನೆ ಅಧಿಕಾರ ಸಿಕ್ಕಿದೆ ಎಂದು ಬದಲಾವಣೆಯಾಗುವ ವ್ಯಕ್ತಿ ನಾನಲ್ಲಾ ಎಲ್ಲ ಕಾರ್ಯಕರ್ತರಿಗೂ ಸಾಮಾಜಿಕ ನ್ಯಾಯದಡಿ ರಾಜಕೀಯದಡಿ ಅವಕಾಶಗಳನ್ನು ಒದಗಿಸಿಕೊಡುತ್ತೇನೆ ಬ.ಸಾಲವಾಡಗಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ 4 ಗ್ರಾಂಪಂಗಳು ಜೆಡಿಎಸ್ ಮಡಿಲಿಗೆ ಸಿಕ್ಕಿವೆ ಪಕ್ಷ ಸಂಘಟನೆಯ ಜೊತೆಗೆ ಎಲ್ಲರನ್ನು ನನ್ನ ಜೊತೆಯಾಗಿ ಕರೆದುಕೊಂಡು ಹೋಗುತ್ತೇನೆ ಜನರ ನಿರಿಕ್ಷೆಗೆ ತಕ್ಕಂತೆ ಅಭಿವೃದ್ದಿ ಕಾರ್ಯಗಳನ್ನು ಮಾಡುತ್ತೇನೆಂದರು.
ಇದೇ ಸಮಯದಲ್ಲಿ ಶಾಸಕ ರಾಜುಗೌಡ ಪಾಟೀಲರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಮಯದಲ್ಲಿ ಮುಖಂಡರುಗಳಾದ ಮಡುಸಾಹುಕಾರ ಬಿರಾದಾರ, ಅಶೋಕ ಅಸ್ಕಿ, ಸಾಹೇಬಗೌಡ ಬಿರಾದಾರ, ಬಸನಗೌಡ ವಣಕ್ಯಾಳ, ಆನಂದಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಈಸುಗೌಡ ನಾಡಗೌಡ, ಶಂಕರಗೌಡ ದೇಸಾಯಿ, ಪಂಚಯ್ಯ ಹಿರೇಮಠ, ವೀರೇಶ ಕಾರಗನೂರ, ಪ್ರಭುಗೌಡ ಹಳ್ಳಿಪಾಟೀಲ, ಡಾ.ಬಲವಂತ್ರಾಯ ನಡಹಳ್ಳಿ, ಬಸವರಾಜ ಗೊರ್ಜಿ, ಆನಂದ ಅಸ್ಕಿ, ಆನಂದಗೌಡ ಪಾಟೀಲ, ಭಾಗಣ್ಣ ಬಿಳೇಭಾವಿ, ಶೇಖು ಧೂಳೇಕರ, ಮುತ್ತು ಧೂಳೇಕರ, ರಾಜು ನಾಯ್ಕೋಡಿ, ಮೋಸಾವಲಿ ಸಾಲವಾಡಗಿ, ಹುಸೇನ ವಕೀಲ, ಮೊದಲಾದವರು ಇದ್ದರು.
ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿಯ ಕೇರೆಗಳನ್ನು ತುಂಬುವ ಕಾರ್ಯಕ್ಕೆ ಮುಂದಾಗಿದ್ದೇನೆ ಈ ತಿಂಗಳಾಂತ್ಯದಲ್ಲಿ ಎಲ್ಲ ಕೇರೆಗಳು ಭರ್ತಿಯಾಗಲಿದ್ದು ಇದರಿಂದ ಕ್ಷೆತ್ರದ ಜನರಿಗೆ ಮತ್ತು ಧನಕರುಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಲಿದೆ.
ರಾಜುಗೌಡ ಪಾಟೀಲ
ಶಾಸಕರು ದೇವರಹಿಪ್ಪರಗಿ ಕ್ಷೇತ್ರ