ಕುಡಿಯುವ ನೀರಿನ ಅರವಟ್ಟಿಗೆ ಅರಂಭ

ರಾಯಚೂರು.ಏ೦೩-
ನಗರದ ಬೈರೂನ್ ಕಿಲ್ಲಾದಲ್ಲಿ ಕುಡಿಯುವ ನೀರಿನ ಅರವಟ್ಟಿಗೆಯನ್ನು ಕಿಲ್ಲೆ ಬ್ರಹನ್ಮಠದ ಮಠಾದೀಶ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಆರಂಭಿಸಿದರು.ಇಂದು ನಗರದ ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಮುಂಭಾಗದಲ್ಲಿ ಸಾಯಿ ಶಿವ ಸೇವಾ ಟ್ರಸ್ಟ್.ಕೇಸರಿ ಗಜಾನನ ಮಿತ್ರ ಮಂಡಳಿ.ನಂದಮೂರಿ ತಾರಕ ರಾಮಾರಾವ್ ಬಾಲಕ್ರಿಷ್ಣ ಅಭಿಮಾನಿಗಳು ಬಳಗದ ವತಿಯಿಂದ ನೀರಿನ ಅರವಟ್ಟಿಗೆಯನ್ನು ಅರಂಬಿಸಿದರು.
ಬೇಸಿಗೆ ಕಾಲದಲ್ಲಿ ಜನರಿಗೆ ನೀರಿನ ದಾಹಾ ತೀರಿಸಲು ಸಹಕಾರಿಯಾಗಲು ಮಾ ಡಿರುವ ಸೇವೆ ಅನನ್ಯವಾದ ರೀತಿಯಲ್ಲಿ ಮಾಡಿರುವುದು ಸಂತೋಷ ಕೊಡುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರು ಬಸವರಾಜ.ಸಾಯಿ ಶಿವ ಸೇವಾ ಟ್ರಸ್ಟ್ ಸಂಚಾಲಕ , ಶಿವಯ್ಯಕೇಸರಿ ಗಜಾನನ ಮಿತ್ರ ಮಂಡಲಿ ಸದಸ್ಯರು ರವಿ.ಸಂತೋಷ್,ನರೇಷ್,ನಾಗರಾಜ,ನಂದಮೂರಿ ತಾರಕ ರಾಮಾರಾವ್.ಬಾಲಕ್ರಷ್ಣ ಅಭಿಮಾನಿಗಳ ಸಂಚಾಲಕ ಮಂಚಾಲ ಭೀಮನ್ನ,ರವಿ ಕುಮಾರ್,ವೆಂಕ ಟೇಶ ಬಾಗವಹಿಸಿದರು.