ಕುಡಿಯುವ ನೀರಿಗೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮಧ್ಯೆ ರಾಜಕೀಯ ವಾಕ್ಸಮರ

ಲಿಂಗಸುಗೂರು.ಜು.೨೭- ಪುರಸಭೆಯ ಅಧ್ಯಕ್ಷೆ ಸುನೀತಾ ಕೆಂಭಾವಿ ಹಾಗೂ ಪುರಸಭೆ ಉಪಾಧ್ಯಕ್ಷ ಎಂಡಿ ರಫೀ ಇವರ ಮದ್ಯೆ ನಡೆಯುತ್ತಿರುವ ವಾಕ್ಸಮರ ತಾರಕ್ಕಕ್ಕೆರಿದೆ ಇಬ್ಬರ ನಡುವೆ ಸಮನ್ವಯ ಕೊರತೆಯೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ ಎಂಬುದು ಸಾಬೀತಾಗಿದೆ.
ಅಧ್ಯಕ್ಷೆ ಪತಿ ಮಹಾಶಯ ಪ್ರತಿಯೊಂದು ಹಂತದಲ್ಲೂ ಪುರಸಭೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದನ್ನು ಮರೆಯುವಂತಿಲ್ಲ ಏಕೆಂದರೆ ಇವರು ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಗೆ ಮುಂದಾಗದೆ ಕೇವಲ ಅಧಿಕಾರಕ್ಕಾಗಿ ವಾಕ್ಸಮರ ಮುಂದುವರೆದಿದೆ ಎಂಬುದು ಈಗಾಗಲೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪುರಸಭೆ ಆಡಳಿತ ಜನರಿಗೆ ಕುಡಿಯಲು ನೀರು ಕೊಡದೆ ರಾಜಕೀಯ ರಾಜಕಾರಣ ಮಾಡುವ ಮೂಲಕ ಜನಸಾಮಾನ್ಯರ ಬದುಕು ಜಟಕಾ ಬಂಡಿ ಯಾಗಿದೆ ಆಡಳಿತ ಮಂಡಳಿಯವರು ಜನರಿಗೆ ಕುಡಿಯಲು ಕೊಡದೆ ಇದ್ದರೆ ಆಡಳಿತ ನಡೆಸುವದಾದರು ಯಾಕೆ ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ. ಶಾಸಕ ಡಿ ಎಸ್ ಹೂಲಗೇರಿ ಇವರು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಬಿಡುಗಡೆ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.
ಆದರೆ ಪುರಸಭೆ ಕಾರ್ಯಾಲಯದಲ್ಲಿ ನಿನ್ನೆ ನಡೆದ ಕಸವಿಲೇವಾರಿ ವಾಹನ ಉದ್ಘಾಟನೆ ನೆರವೇರಿಸಿ ನಂತರ ಕಾರ್ಯಾಲಯದಲ್ಲಿ ಅಧಿಕಾರಿಗಳ ಜೊತೆ ಹಾಗೂ ಪುರಸಭೆ ಸದಸ್ಯರ ಸಭೆ ನಡೆಯಿತು ಆದರೆ ಇಲ್ಲಿ ನಡೆದ ಘಟನೆ ಶಾಸಕರ ಸಮ್ಮುಖದಲ್ಲಿ ಅಧ್ಯಕ್ಷೆ ಸುನೀತಾ ಕೆಂಭಾವಿ ಉಪಾಧ್ಯಕ್ಷ ಎಂಡಿ ರಫೀ ಮದ್ಯೆ ಕುಡಿಯುವ ನೀರಿನ ರಾಜಕಾರಣ ಏರು ಧ್ವನಿಯಲ್ಲಿ ಮಾತನಾಡುವ ಮುಖಾಂತರ ಪುರಸಭೆಯ ಮಾನ ಮರ್ಯಾದೆ ಹರಾಜಗಿಟ್ಟ ಪ್ರಸಂಗ ಶಾಸಕರ ಮುಂದೆ ನಡೆದು ಹೋಯಿತು.
ತಕ್ಷಣವೇ ಶಾಸಕ ಡಿ ಎಸ್ ಹೂಲಗೇರಿ ಮದ್ಯೆ ಪ್ರವೇಶ ಅಧ್ಯಕ್ಷೆ ಸುನೀತಾ ಕೆಂಭಾವಿ ಉಪಾಧ್ಯಕ್ಷ ಎಂಡಿ ರಫೀ ಇವರ ಮದ್ಯೆ ನಡೆಯುತ್ತಿರುವ ವಾಕ್ಸಮರ ತಾರಕ್ಕಕ್ಕೆರಿದೆ ಎಂಬುದನ್ನು ಅರಿತು ಶಾಸಕ ಮದ್ಯೆ ಪ್ರವೇಶಿಸಿ ಇಬ್ಬರಿಗೂ ಉಭಯ ನಾಯಕರಿಗೆ ಸಮಜಾಯಿಷಿ ನೀಡಿದರು ಪುರಸಭೆ ಆಡಳಿತ ಮಂಡಳಿ ಅಧ್ಯಕ್ಷೆರು ಉಪಾಧ್ಯಕ್ಷರು ಪಟ್ಟಣದ ಸದಸ್ಯರು ಸೇರಿ ನಗರದ ಅಭಿವೃದ್ಧಿಗೆ ಗಮನ ಕೊಡಬೇಕು ಎಂದು ಸಭೆಯಲ್ಲಿ ಕಿವಿಮಾತು ಹೇಳಿದರು.
ಕುಡಿಯುವ ನೀರಿಗೆ ಹಾಹಾಕಾರಕ್ಕೆ ತಾತ್ಸಾರ ತೊರಿದ ಅಧಿಕಾರಿಗಳ ವಿರುದ್ಧ ಶಾಸಕ ಡಿ ಎಸ್ ಹೂಲಗೇರಿ ಕೆಂಡಾಮಂಡಲ.
ಪಟ್ಟಣದಲ್ಲಿ ಕುಡಿಯುವ ನೀರಿಗೆ ಹಾಹಾಕಾರಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ತಾತ್ಸಾರ ತೊರಿದ ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಇವರ ಮೇಲೆ ಕೆಂಡಾಮಂಡಲವಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳ ಎಡವಟ್ಟಿನಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆಗೆ ತೊಂದರೆ ಅನುಭವಿಸುವಂತಾಗಿದೆ ಇದರಿಂದಾಗಿ ನಾನು ಕ್ಷೇತ್ರದ ಶಾಸಕನಾಗಿ ಪಟ್ಟಣದ ಜನತೆಗೆ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಇದೆ ಸಂದರ್ಭದಲ್ಲಿ ನಾಗರೀಕರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ದೊಡ್ಡನಗೌಡ ಪಾಟೀಲ್ ಹೊಸಮನಿ, ಬಾಬು ರೆಡ್ಡಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪಾಮಯ್ಯ ಮುರಾರಿ, ಅಮರಗುಂಡಪ್ಪ ಮೇಟಿ, ಪರುಶುರಾಮ ನಗನೂರ ಸೇರಿದಂತೆ ಇತರರು ಪುರಸಭೆಯ ಅಧಿಕಾರಿಗಳು ಇದ್ದರು.