ಕುಡಿಯುವ ನೀರಿಗಾಗಿ ರಸ್ತೆ ತಡೆದು ಪ್ರತಿಭಟನೆ

ಕಲಬುರಗಿ:ಜೂ.19: ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಸರಬರಾಜಾಗಿಲ್ಲ ಎಂದು ರವಿವಾರ ರಾಮನಗರ ಕ್ರಾಸ್ ನಲ್ಲಿ ವಾರ್ಡ ನಂ 5ರ ನಿವಾಸಿಗಳು ಪಾಲಿಕೆ ಸದಸ್ಯ ಬಸವರಾಜ ಮುನ್ನಳ್ಳಿ ನೇತೃತ್ವದಲ್ಲಿ ರಸ್ತೆ ತಡೆ, ಪ್ರತಿಭಟನೆ ನಡೆಸಿದರು.
ಖಾಲಿ ಕೊಡಗಳೊಂದಿಗೆ ಬಡಾವಣೆಯ ಮಹಿಳೆಯರು, ಮಕ್ಕಳು ಸೇರಿ ರಸ್ತೆ ತಡೆ ನಡೆಸಿ, ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಜಲಮಂಡಳಿಗೆ ಹಿಡಿ ಶಾಪ ಹಾಕಿದರು.ಪ್ರತಿಭಟನೆಯಲ್ಲಿ ಚನ್ನವೀರ ನಂದ್ಯಾಳ, ಬಸವರಾಜ ನಂದ್ಯಾಳ, ನಾಗರಾಜ ಅಂಬಲಗಿ ಹಾಗೂ ಇತರರು ಭಾಗವಹಿಸಿದ್ದರು. ಕುಡಿಯುವ ನೀರಿಗಾಗಿ ರಸ್ತೆ ತಡೆ ನಡೆಸಿದ್ದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಸಾರ್ವಜನಿಕರು ಕೆಲ ಕಾಲ ಪರದಾಡಬೇಕಾಯಿತು.