
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.08: ತಾಲ್ಲೂಕಿನ ಉಪ್ಪಾರ ಹೊಸಹಳ್ಳಿ, ಬಲಕುಂದಿ, ಮೈಲಾಪುರ ಗ್ರಾಮಗಳಿಗೆ ಕೆರಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಕಳೆದ ವಾರದಿಂದ ಕೆರಯು ನೀರಿಲ್ಲದೆ ಸಂರ್ಪೂಣ ಖಾಲಿಯಾಗಿದ್ದು, ನೀರು ಸರಬಾರಾಜು ಇಲ್ಲದೆ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲು ಅನೇಕ ಬಾರಿ ಮನವಿ ನೀಡಿದ್ದು, ಗ್ರಾಮ ಸಭೆಯಲ್ಲಿ ಪ್ರಸ್ಥಾಪಿಸಿದರು, ಸಮರ್ಪಕವಾಗಿ ನೀರು ಸರಬರಾಜು ಮಾಡುವಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ವಿಫಲರಾಗಿದ್ದರೆ ಎಂದು ಆರೋಪಿಸಿ ಕೆರೆಯ ದಡದಲ್ಲಿ ಉಪ್ಪಾರಹೊಸಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕೆರೆಗೆ ಸೂಕ್ತವಾದ ಭದ್ರತೆ ಇಲ್ಲದೆ ಕೆರೆಗೆ ದನ, ಕರು, ಕುರಿಗಳು ಕುಡಿದ ನೀರನ್ನು ಹಾಗೆ ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದರೆ ಎಂದು ಗ್ರಾಮಸ್ಥರ ಆಕ್ರೋಶವಾಗಿದೆ,
ಪಿಡಿಒ ಹಾಗೂ ಕೆರೆ ನಿರ್ವಹಣೆ ಗುತ್ತಿಗೆದಾರರ ನಿರ್ಲಕ್ಷ್ಯತೆ ಯಿಂದ ಅವಧಿಗೆ ಮುಂಚಿತವಾಗಿ ಕೆರೆ ನೀರು ಖಾಲಿಯಾಗಿದ್ದು, ಸಾರ್ವಜನಿಕರು ಕುಡಿಯಲು ಬೋರ್ವೆಲ್ ನೀರನ್ನು ಉಪಯೋಗಿಸುವಂತಗಿದೆ.
ಕೆರೆಯನ್ನು ಸ್ವಚ್ಚತೆ ಮಾಡದೆ ಹುಳು ತುಂಬಿಕೊಂಡಿದ್ದು, ಎರಡು ವರ್ಷಗಳಿಂದ ಕೆರೆಯ ನೀರನ್ನು ಪಿಲ್ಟ್ರ ಮಾಡದೆ ಗ್ರಾಮಕ್ಕೆ ಹಾಗೆ ನೀರು ಸರಬರಾಜು ಮಾಡುತ್ತಿದ್ದು ಮತ್ತು ಕರೆಯಲ್ಲಿ ತೆಗ್ಗಿನಲ್ಲಿ ನಿಂತ ನೀರು ದುರ್ವಾಸನೆ ಕೂಡಿದ್ದು, ಇತಂಹ ನೀರನ್ನು ಗ್ರಾಮದ ಜನರು ಕುಡಿದು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದರೆ ಎಂದು ಗ್ರಾಮಸ್ಥರಾದ ಜಗದೀಶ್, ಮಾನಪ್ಪ ಅಕ್ರೋಶಿಸಿದರು.
ಚಂಕನಗೌಡ, ರಾಮುರ್ತಿ,ಅನುಮಣ್ಣ, ಎಚ್ ರಾಜೇಶ್, ಎಚ್.ರಾಜ ,ಮಾನಪ್ಪ, , ಯಾದವ್, ರಾಮೇಶ್ ಹಾಗೂ ಗ್ರಾಮಸ್ಥರು ಇದ್ದರು.