ಕುಡಿಯುವ ನೀರಿಗಾಗಿ ಅಲೆದಾಡುತ್ತಿರುವ ಸೋಂಕಿತನ ಕುಟುಂಬ

ಹನೂರು: ಜೂ.05: ತಂದೆಗೆ ಕೊರೊನಾ ಸೋಂಕು ಕಾಣಿಸಿಕೊಂಡು ಹೋಂ ಐಸೋಲೇಷನ್‍ನಲ್ಲಿ ಇರುವುದರಿಂದ ಗ್ರಾಮದ ಜನರು ನೀರನ್ನು ತರಲು ಹೋದರೆ ತೊಂದರೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಸಾಮಾಜಿಕ ಜಾಲಾತಾಣದಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಹನೂರು ತಾಲ್ಲೂಕಿನ ದಿನ್ನಳ್ಳಿ ಗ್ರಾಮದ ಚಂದ್ರನಾಯ್ಕ ಎಂಬ ಯುವಕ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ಹರಿಯಬಿಟ್ಟಿದ್ದು, ಈತನ ತಂದೆಗೆ ಕಳೆದ 6 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಆದ ಹಿನ್ನಲೆಯಲ್ಲಿ ಹೋಂ ಐಸೋಲೆಷನ್‍ನಲ್ಲಿ ಇರುವುದರಿಂದ ನೀರನ್ನು ತರಲು ಹೋದರೆ ಜನತೆ ಬಿಡುತ್ತಿಲ್ಲ. ಮಾನವೀಯತೆಯನ್ನು ತೋರುತ್ತಿಲ್ಲ. ಜೊತೆಗೆ ಗ್ರಾ.ಪಂ.ಕೂಡ ನೀರಿನ ಸೌಕರ್ಯವನ್ನು ಒದಗಿಸುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಕೂಡ ಇತ್ತಾ ಸುಳಿದಿಲ್ಲ. ಕೊವೀಡ್ ಸಂಕಷ್ಟದ ಮಧ್ಯೆ ಕುಡಿಯವ ನೀರಿಗಾಗಿ ಅಲೆದಾಡುವಂತಹ ಪರಿಸ್ಥಿತಿ ಬಂದೊದಿಗಿರುವುದರ ಬಗ್ಗೆ ನಮ್ಮ ಸಂಕಷ್ಟ ಯಾರಿಗೂ ಬರಬಾರದು ಎಂದು ಭಾವುಕನಾಗಿ ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಾನೆ.