ಕುಡಿದ ಮತ್ತಿನಲ್ಲಿ ಕುಟುಂಬಸ್ಥರ ಬರ್ಬರ ಹತ್ಯೆ

ಗರ್ಭಿಣಿ ಪತ್ನಿ, ತಾಯಿ, ಇಬ್ಬರು ಮಕ್ಕಳನ್ನು ಕೊಚ್ಚಿಕೊಂದ ಪಾಪಿ ಪತಿ
ಮೈಸೂರು: ಏ.29: ಕುಡಿದ ಮತ್ತಿನಲ್ಲಿ ತಾಯಿ, ಗರ್ಭಿಣಿ ಪತ್ನಿ, ಮಕ್ಕಳಿಬ್ಬರನ್ನು ವ್ಯಕ್ತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ
ನೆಡದಿದೆ.
ಈ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಚಾಮೇಗೌಡನಹುಂಡಿಯಲ್ಲಿ ನಡೆದಿದ್ದು, ತಾಯಿ ಕೆಂಪಮ್ಮ (65), ಗರ್ಭಿಣಿ ಪತ್ನಿ ಗಂಗಾ (28), ಮಕ್ಕಳಾದ ಸಾಮ್ರಾಟ್ (2), ರೋಹಿತ್ (1) ಎಂಬುವವರೇ ಕೊಲೆಯಾದ ದುರ್ದೈವಿಗಳು.
ಮಣಿಕಂಠ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಕುಟುಂಬದ ನಾಲ್ವರನ್ನೂ ಹತ್ಯೆಗೈದಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಸರಗೂರು ಪಿಎಸ್‍ಐ ದಿವ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಣಿಕಂಠ ಎಂಬ ವ್ಯಕ್ತಿ ತನ್ನ ಇಡೀ ಕುಟುಂಬವನ್ನೇ ಮಾರಕಾಸ್ತ್ರಗಳಿಂದ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.