ಕುಡಿದ ಅಮಲಿನಲ್ಲಿ 4ನೇ ಪತ್ನಿ ಕೊಂದ ಪತಿ ಸೆರೆ

ಬೆಂಗಳೂರು,ನ.22- ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಪತಿ ಕಟ್ಟಿಗೆಯಿಂದ ಬಡಿದು ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಅವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬೋರಯ್ಯ ತಡರಾತ್ರಿ ಕುಡಿದು ಜಗಳವಾಡಿ ಪತ್ನಿ ಭದ್ರಮ್ಮನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇಬ್ಬರೂ ಕೂಡಾ ಪಾನಮತ್ತರಾಗಿದ್ದರೆಂದು ಹೇಳಲಾಗಿದೆ. ಮೃತ ಭದ್ರಮ್ಮ ಬೋರಯ್ಯನ ನಾಲ್ಕನೇ ಪತ್ನಿಯಾಗಿದ್ದಳು.
ಈ ಮೊದಲು ಬೋರಯ್ಯ ತನ್ನ ಎರಡನೇ ಪತ್ನಿಯನ್ನು ಸಹ 2014ರಲ್ಲಿ ಇದೇ ರೀತಿ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ 6 ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಹೊರಬಂದು ಭದ್ರಮ್ಮಳನ್ನು ಮದುವೆಯಾಗಿದ್ದನು. ಈ ಮಧ್ಯ ಎರಡನೇ ಪತ್ನಿ ಬದುಕಿರುವಾಗಲೇ ಇನ್ನೊಂದು ಮದುವೆ ಆಗಿದ್ದ. ಇದೀಗ ಪತ್ನಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ