ಕುಡಿದು ಬಂದು ಕಿರಿಕಿರಿ: ಅಣ್ಣನನ್ನೇ ಕೊಂದ ತಮ್ಮ

ವಿಜಯಪುರ,ಸೆ.6-ಪ್ರತಿದಿನ ಕುಡಿದು ಬಂದು ಕಿರಿಕಿರಿ ಮಾಡುತ್ತಿದ್ದ ಅಣ್ಣನನ್ನು ತಮ್ಮನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಜಗ್ಗೇಶ ವಡ್ಡರ ಹತ್ಯೆಯಾಗಿರುವ ಯುವಕ. ಜಗ್ಗೇಶ ವಡ್ಡರ ಕುಡಿಯಲು ಹಣ ಕೇಳಿ ಪ್ರತಿದಿನ ಕಿರಿಕಿರಿಮಾಡುತ್ತಿದ್ದರಿಂದ ರೋಸಿಹೋದ ಆರೋಪಿ ರಾಹುಲ್ ವಡ್ಡರ, ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಚಡಚಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.