ಕುಡಿತಿನ ಮಗ್ಗಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ

ಕೊಟ್ಟೂರು ನ 21 :ಪಟ್ಟಣ ಸಮೀಪದ ಕುಡಿತಿನ ಮಗ್ಗಿ ಗ್ರಾಮದಲ್ಲಿ ಇಂದು ಹೊಸದಾಗಿ ನಿರ್ಮಾಣ ಗೊಂಡಿರುವ ಆಂಜನೇಯಸ್ವಾಮಿಯ ದೇವಾಲಯ ಉದ್ಘಾನೆ ಹಾಗೂಮೂರ್ತಿ ಪ್ರತಿಷ್ಠಾಪನೆ ನೇರವೇರಿತು. ಹರಪನಹಳ್ಳಿಯ ತಗ್ಗಿನ ಮಠದವರ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪೂಜಾವಿಧಿ ವಿಧಾನಗಳು ನಡೆದವು.ಊರಿನ ದೈವದವರು, ದೇವೇಂದ್ರಗೌಡ, ಪಿ.ಚನ್ನಬಸಪ್ಪ, ಪಿ.ಸಣ್ಣಬಸವನಗೌಡ, ದೊಡ್ಡಕೊಟ್ರಪ್ಪಸ್ವಾಮಿಗಳಿಗೆ ಸನ್ಮಾನಮಾಡಿ ಗೌರವಿಸಲಾಯಿತು.