ಕುಡಿತಿನಿ ಪ.ಪಂಚಾಯಿತಿ ನೂತನ ಅದ್ಯಕ್ಷ,ಉಪಾದ್ಯಕ್ಷರ ಅಧಿಕಾರಸ್ವೀಕಾರ

ಕುರುಗೋಡು.ನ 03 : . ಕುಡಿತಿನಿ ಪಟ್ಟಣದಲ್ಲಿ ಕುಡಿಯುವನೀರು, ಚರಂಡಿ, ಸ್ವಚ್ಚತೆ, ಬೀದಿದೀಪ ಸೇರಿದಂತೆ ಇತರೆ ಮೂಲಭೂತಸೌಲಭ್ಯಗಳಿಂದ ಸುಂದರಪಟ್ಟಣವನ್ನಾಗಿ ರೂಪಿಸಿ, ರಾಜ್ಯದಲ್ಲೇ ಕುಡಿತಿನಿಯನ್ನು ಮಾದರಿ ಪಟ್ಟಣವನ್ನಾಗಿಸಲು ಸಂಕಲ್ಪವಿದೆ ಎಂದು ಕುಡಿತಿನಿ ಪಟ್ಟಣಪಂಚಾಯಿತಿ ನೂತನ ಅದ್ಯಕ್ಷ ವಿ.ರಾಜಶೇಖರ ಭರವಸೆ ನೀಡಿದರು.
ಅವರು ಸೋಮವಾರ ಸಮೀಪದ ಕುಡಿತಿನಿ ಪಟ್ಟಣಪಂಚಾಯಿತಿಯ ಕಛೇರಿಯಲ್ಲಿ ನೂತನ ಅದ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕುಡಿತಿನಿ ಪಟ್ಟಣದ ಸುತ್ತ-ಮುತ್ತ ಕೈಗಾರಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ದಿನನಿತ್ಯ ಧೂಳು ಸಹ ಹೆಚ್ಚಾಗಿದೆ. ಅಧಿಕಾರಿಗಳು ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಕುಡಿತಿನಿಯನ್ನು ಧೂಳುಮುಕ್ತ ಪಟ್ಟಣವನ್ನಾಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಕುಡಿತಿನಿ ಪಟ್ಟಣಪಂಚಾಯಿತಿ ಉಪಾದ್ಯಕ್ಷೆಯಾಗಿ ಗೀತಾನಾಗರಾಜರವರು ನೂತನವಾಗಿ ಅದಿಕಾರಸ್ವೀಕರಿಸಿ ಮಾತನಾಡಿ, ಕುಡಿತಿನಿಯ ಎಲ್ಲಾ 19 ವಾರ್ಡುಗಳ ಜನರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ವಂದಿಸಿ ಅವರ ಕೆಲಸಮಾಡಲು ಮುಂದಾಗುತ್ತೇನೆ ಎಂದರು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಅಧಿಕಾರಸ್ವೀಕಾರ ; ಕುಡಿತಿನಿ ಪ.ಪಂ. ನೂತನ ಅದ್ಯಕ್ಷ ವಿ.ರಾಜಶೇಖರ, ಮತ್ತು ಉಪಾದ್ಯಕ್ಷೆಯಾಗಿ ಗೀತಾನಾಗರಾಜರವರು ಮುಖ್ಯಾಧಿಕಾರಿ ಹಾಗು ಎಲ್ಲಾ ಸದಸ್ಯರ ಸಮಕ್ಷದಲ್ಲಿ ಅದಿಕಾರಸ್ವೀಕರಸಿದರು. ನಂತರ ಅವರನ್ನು ಎಲ್ಲಾ ಸದಸ್ಯರು, ಊರಿನ ಮುಖಂಡರು ಸಾಲು-ಸಾಲಾಗಿ ಹೂಗುಚ್ಚನೀಡಿ ಅಬಿನಂದಿಸಿದರು.
ಮುಖ್ಯಾಧಿಕಾರಿ ಸತ್ಯನಾರಾಯಣರಾವ್, ಅಧಿಕಾರಿ ವೇದಮೂರ್ತಿ, ಆರ್‍ಒ. ಮಾಧುರಿ ಸೇರಿದಂತೆ ಪಟ್ಟಣಪಂಚಾಯಿತಿಯ ಎಲ್ಲಾ ಸದಸ್ಯರು, ಊರಿನ ಮುಖಂಡರು ಇದ್ದರು.