
ಸಂಜೆವಾಣಿ ವಾರ್ತೆ
ಕುರುಗೋಡು:ಮಾ.10: ತಾಲೂಕು ಸಮೀಪದ ಕುಡಿತಿನಿ ಪಟ್ಟಣದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ಇಲ್ಲವೇ ನಮ್ಮ ಭೂಮಿಗಳನ್ನು ವಾಪಸ್ ಕೊಡಿ ಎಂದು ರೈತರು ಮತ್ತು ವಿವಿಧ ಕನ್ನಡಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ 83ನೇ ದಿನಕ್ಕೆ ಕಾಲಿಟ್ಟದೆ.
ಕುಡಿತಿನಿ ಪಟ್ಟಣದ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ರೈತರ ಜಮೀನು ಖರೀದಿಸಿ 13 ವರ್ಷಗಳಾದರೂ ಕಾರ್ಖಾನೆ ಸ್ಥಾಪಿಸಿಲ್ಲ, ಉದ್ಯೋಗ ಕೊಟ್ಟಿಲ್ಲ, ನಿರುದ್ಯೋಗ ಭತ್ಯಾ ಇಲ್ಲ, ಭೂಮಿ ಕಳೆದುಕೊಂಡ ರೈತರ ಸ್ಥಿತಿ ಚಿಂತಾಜನಕವಾಗಿದೆ ರೈತರಿಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಇನ್ನಾದರೂ ಸರ್ಕಾರ ಮುಂದಾಗಬೇಕು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರತಿಭಟನ ಸ್ಥಳಕ್ಕೆ ಬಂದು ರೈತರ ಬೇಡಿಕೆಗಳು ಈಡೇರಿಸುತ್ತೇವೆ ಎಂಬ ಹೇಳಿಕೆಗಳು ಕಾರ್ಯರೂಪಕ್ಕೆ ಬರಬೇಕು ಎಂದರು.
ನಮ್ಮ ಹೋರಾಟಕ್ಕೆ ಗಮನ ಹರಿಸದೆ ಇರುವುದು ದುರಂತದ ಸಂಗತಿ ಈ ವಿಷಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಪರಿಹಾರ ಕಲ್ಪಿಸದೇ ಇದ್ದಲ್ಲಿ ಮುಂದಿನ ದಿನದಲ್ಲಿ ಈ ಹೋರಾಟದ ಹಾದಿ ತೀವ್ರಗೊಳ್ಳುತ್ತದೆ ಅದಕ್ಕೆಲ್ಲ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೊಣೆಯಾಗ ಬೇಕಾಗುತ್ತದೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೆಚ್ಚರಿಸಿದರು.
ಈ ಸಂದರ್ಭದಲ್ಲಿ ಕುಡಿತಿನಿ, ವೇಣಿ ವೀರಾಪುರ, ಕೊಳಗಲ್ಲು, ಯಾರಂಗಳಿ, ಹೊರಗಿನ ದೋಣಿ, ಜಾನೆ ಕುಂಟೆ, ಸಿದ್ದಮ್ಮನಹಳ್ಳಿ ಗ್ರಾಮಗಳ ಜನರು ಮತ್ತು ರೈತ ಮುಖಂಡರಾದ ತಿಪ್ಪೇಸ್ವಾಮಿ, ಜಂಗ್ಲಿ ಸಾಬ್, ಅಂಜಿನಪ್ಪ, ನಾಗದೇವ ಮತ್ತು ಹುಲಿಗೆಮ್ಮ ಇತರರು ಇದ್ದರು