ಕುಡಾ ಅಧ್ಯಕ್ಷರಾಗಿ ಮಜರ್ ಆಲಂ ಖಾನ್ ಅಧಿಕಾರ ಸ್ವೀಕಾರ ಬಡ ಜನರಿಗೆ ಕಡಿಮೆ ದರದಲ್ಲಿ ನಿವೇಶನ

ಕಲಬುರಗಿ:ಮಾ.4: ಕಲಬುರಗಿ ನಗರದಲ್ಲಿ ಮೂರ್ನಾಲ್ಕು ಬಡಾವಣೆ ಅಭಿವೃದ್ಧಿಪಡಿಸಿ 20×30 ಅಳತೆಯ ನಿವೇಶನಗಳನ್ನು ಬಡ ಜನರಿಗೆ ನೀಡಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಜರ್ ಆಲಂ ಖಾನ್ ಅವರು ಹೇಳಿದರು.

ಸೋಮವಾರ ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಲಬುರಗಿ ನಗರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಆಳಂದ ರಸ್ತೆ, ತಾಜ ಸುಲ್ತಾನಪುರ ರಸ್ತೆ ಅಭಿವೃದ್ಧಿಪಡಿಸಲಾಗುವುದು. ನಗರದ ಜನತೆ ವಾರಂತ್ಯಾದ ದಿನಗಳನ್ನು ಕಳೆಯಲು ನಗರಕ್ಕೆ ಹೊಂದಿಕೊಂಡಿರುವ ಕೆರೆ ಭೋಸಗಾ, ಖಾಜಾ ಕೋಟನೂರ ಕೆರೆಗಳನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತನೆ ಮಾಡಲಾಗುವುದೆಂದರು.

ಕಲಬುರಗಿ ನಗರದಲ್ಲಿನ ಸಾರ್ವಜನಿಕ ಉದ್ಯಾನವನಗಳ ಸಂರಕ್ಷಣೆ ಜೊತೆಗೆ ಉದ್ಯಾನವನದಲ್ಲಿ ಜಿಮ್, ಯೋಗಾ ಸೆಂಟರ್ ಸ್ಥಾಪಿಸಲಾಗುವುದು. ಒಟ್ಟಾರೆಯಾಗಿ ಕಲಬುರಗಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇದಕ್ಕೆ ಬೇಕಾದ ಹೆಚ್ಚಿನ ಅನುದಾನವನ್ನು ಸಹ ರಾಜ್ಯ ಸರ್ಕಾರದಿಂದ ತರಲಾಗುವುದು ಎಂದರು.

ಅನಧಿಕೃತ ಬಡಾವಣೆ ಕಡಿವಾಣಕ್ಕೆ ಟಾಸ್ಕ್ ಪೆÇೀರ್ಸ್: ಕಲಬುರಗಿ ನಗರದಲ್ಲಿನ ಅನಧಿಕೃತ ಬಡಾವಣೆಗಳ ನಿಯಂತ್ರಣಕ್ಕೆ ಟಾಸ್ಕ್ ಫೆÇೀರ್ಸ್ ರಚಿಸಲಾಗುವುದು. ಪ್ರಾಧಿಕಾರದ ಸಿ.ಎ. ನಿವೇಶನಗಳನ್ನು ಆಸ್ಪತ್ರೆ, ಶಾಲೆಗೆ ನೀಡಲಾಗುವುದು ಎಂದು ಮಜರ್ ಆಲಂ ಖಾನ್ ತಿಳಿಸಿದರು.

ನೂತನ ಅಧ್ಯಕ್ಷರಿಗೆ ಕರ್ನಾಟಕ ರೇμÉ್ಮ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷೆ ಮತ್ತು ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಹೂಗುಚ್ಛ ನೀಡಿ ಶುಭ ಕೋರಿದರು. ಪ್ರಾಧಿಕಾರದ ಆಯುಕ್ತ ಗಂಗಾಧರ ಎಸ್. ಮಳಗಿ ಅವರು ಸಂವಿಧಾನ ಪೀಠಿಕೆ ನೀಡಿದರು. ನಗರ ಯೊಜನಾ ಪ್ರಾಧಿಕಾರದ ಸದಸ್ಯ ಎಸ್.ಎಸ್.ಗಾರಂಪಳ್ಳಿ ,ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಸಂತೋಷ ಪಾಟೀಲ ದಣ್ಣೂರ, ಸೈಯದ್ ಮುಸ್ತಫಾ ಹುಸೇನಿ, ಈರಣ್ಣ ಝಳಕಿ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಅಶೋಕ ವೀರನಾಯಕ, ಶಿವಾನಂದ ಹೊನಗುಂಟಿ ಮತ್ತು ಚುನಾಯಿತ ಜನಪ್ರತಿನಿಧಿಗಳು, ಕುಡಾ ಅಧಿಕಾರಿ ಸಿಬ್ಬಂದಿ ವರ್ಗದವರು ಇದ್ದರು.