ಸಂಜೆವಾಣಿ ವಾರ್ತೆ
ಕುರುಗೋಡು:ಏ.23: ತಾಲೂಕು ಸಮೀಪದ ಕುಡತಿನಿ ಪಟ್ಟಣದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆ ಆಗಮಿಸಿದ ಮಿಲಿಟರಿ ಪಡೆಗಳ ಸೈನಿಕರಿಗೆ ಕುಡತಿನಿ ಸಿವಿಲ್ ಮತ್ತು ಬಲ್ಕರ್, ಟಿಪ್ಪರ್ ಲಾರಿ ಮಾಲೀಕರ ಹಾಗೂ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಶಿವಶಂಕರ್ ನೇತೃತ್ವದಲ್ಲಿ ಲಾರಿ ಮಾಲೀಕರು ಹಾಗೂ ಮುಖಂಡರು ಹೂಮಳೆಗೈಯ್ಯುವ ಮೂಲಕ ಶುಕ್ರವಾರ ಸಂಜೆ ಅದ್ಧೂರಿಯಾಗಿ ಸ್ವಾಗತಿಸಿದರು.
ಭದ್ರತಾ ಪಡೆಗಳ ಪಥ ಸಂಚಲನದ ವೇಳೆ ಜನರು ಹೂಗಳನ್ನು ಹಾಕುವ ಮೂಲಕ ಮುಕ್ತ, ನ್ಯಾಯ ಸಮ್ಮತ ಚುನಾವಣೆಗಾಗಿ ಆಗಮಿಸಿದ ಪಡೆಗಳನ್ನು ಬರಮಾಡಿಕೊಂಡರು. ವಿಧಾನಸಭೆ ಚುನಾವಣೆ 2023ರ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ಪ್ರಕ್ರಿಯೆ ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಭದ್ರತಾ ಪಡೆಯ ಪಥಸಂಚಲನ ನಡೆಯಿತು.ಲಾರಿ ಮಾಲೀಕರಿಂದ ಮಿಲಿಟರಿ ಪಡೆಗಳ ಸೈನಿಕರಿಗೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು, ಮಿಲಿಟರಿ ಪಡೆಗಳ ಸೈನಿಕರು, ಮುಖಂಡರು ಪಾಲ್ಗೊಂಡಿದ್ದರು.