ಕುಡತಿನಿಯಲ್ಲಿ ಮಳೆಗಾಗಿ ” ವಿರಾಠ ಪರ್ವ ಪರಾಯಣ”


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.10: ತಾಲೂಕಿನ  ಕುಡತಿನಿ ಪಟ್ಟಣದ ಅರಾಧ್ಯ ದೈವ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಇಂದು  ಸಂಗಮೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ
ಮಳೆಗಾಗಿ ವಿರಾಠ ಪರ್ವ ಪಾರಾಯಣ ಮಾಡಲಾಯ್ತು‌
ರಾಜ್ಯದಲ್ಲಿ ಮಳೆ ಕೊರತೆ, ಜಿಲ್ಲೆಯಾದಂತ ಮಳೆ ಕಡಿಮೆ ಆಗಿದೆ ಕುಡತಿನಿಯಲ್ಲಿ ಮುಂಗಾರು ಮುಗಿದರೂ ಮಳೆ ಬಾರದೇ ಬಿತ್ತನೆ ಮಾಡಲಾಗಲಿಲ್ಲ, ಕಾರಣ ರೈತರು ನಾಡಿನ ಸಂಕಷ್ಟ ನಿವಾರಣೆಗೆ ಮತ್ತು ಅವರ ಅಭಿವೃದ್ಧಿಗೆ ಹಾಗೂ ಪ್ರಾಣಿ ಪಕ್ಷಿಗಳ ಹಿತಕ್ಕಾಗಿ, ಸಮೃದ್ಧಿಯ ಮಳೆ ಬೆಳೆಗಾಗಿ ಇಂದು ಬೆಳಿಗ್ಗೆ 6 ವಿಶೇಷ ಪೂಜೆ ಸಲ್ಲಿಸಿ “ವಿರಾಠ ಪರ್ವ ಪಾರಾಯಣ” ಪ್ರಾರಂಭಿಸಲಾಯಿತು, ಇಂದು ಸಂಜೆ 6 ಗಂಟೆಗೆ ಮಂಗಲವಾಗುವುದು, ಮಂಗಲ ಸಮಯದಲ್ಲಿ ಪಟ್ಟಣದ ಎಲ್ಲಾ ದೇವಾಲಯಗಳಲ್ಲಿ ಏಕ ಕಾಲಕ್ಕೆ ಹೂ-ಹಣ್ಣು ಕಾಯಿ ಸಮರ್ಪಿಸಿ, ಪೂಜೆ ಸಲ್ಲಿಸಿ ನಂತರ ನೆರದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಗುವುದು. ಬಿ.ಕೆ.ಮಲ್ಲಯ್ಯ ಮಾತನಾಡಿ 50 ವರ್ಷಗಳ ಹಿಂದೆ ಇದೇ ರೀತಿಯಾಗಿ ಮಾಡಲಾಗುತ್ತು, ಆಗ ಮಾರನೇ ದಿನವೇ ಸಮೃದ್ಧಿಯಾಗಿ ಮಳೆಯಾಗಿತ್ತು ಎಂದು ನಮ್ಮ ಹಿರಿಯರು ತಿಳಿಸಿದ ಮೇರೆಗೆ ನಾವು ಇಂದು ನಾಡಿನ ರೈತರ ಒಳಿತಿಗಾಗಿ ಈ ವಿರಾಠ ಪರ್ವ ಪಾರಾಯಣ ಹಮ್ಮಿಕೊಳ್ಳಲಾಗಿದೆ ಎಂದರು,  ಮೂರುಣ್ಣಿ ಪಂಪಾಪತಿ ಮತ್ತು  ಚಂದ್ರಗೌಡ ಅವರು “ವಿರಾಟ ಪರ್ವ” ಪುರಾಣ ಪಠಣೆ ಮಾಡಿದರು,
 ಈ ಸಂದರ್ಭದಲ್ಲಿ ಸಂಗಮೇಶ್ವರ ದೇವಸ್ಥಾನದ ಕಮಿಟಿಯವರು ಷಣ್ಮುಖಯ್ಯಸ್ವಾಮಿ, ಹನುಮಂತಪ್ಪ, ಶ್ರೀನಿವಾಸ, ನಾಗದೇವ, ಈರಣ್ಣ, ಕೊಂಡಯ್ಯ, ವಿಜಯ ಕುಮಾರ ಇತರರು ಇದ್ದರು.