ಕುಡತಿನಿಯಲ್ಲಿ ಬೀದಿಬದಿವ್ಯಾಪಾರಿಗಳ ಕಿರುಸಾಲ ಮೇಳ

ಕುರುಗೋಡು. ಡಿ.19 ಸಮೀಪದ ಕುಡುತಿನಿ ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಪ್ರತಿಯೋಬ್ಬ ವ್ಯಾಪಾರಿಗೂ 10 ಸಾವಿರ ರೂ.ಗಳನ್ನು ಅತಿ ಕಡಿಮೆ ಬಡ್ಡಿ ಧರದಲ್ಲಿ ನೀಡಲಾಗುವುದು ಕಿರುಸಾಲಪಡೆದು ಅಭಿವ್ರುದ್ದಿಹೊಂದಬೇಕೆಂದು ಕುಡುತಿನಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ವಿ.ರಾಜಶೇಖರ್ ಹೇಳಿದರು.
ಅವರು, ಸಮೀಪದ ಕುಡುತಿನಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಆವರಣದಲ್ಲಿ ಪಟ್ಟಣ ಪಂಚಾಯ್ತಿ ಮತ್ತು ಪಟ್ಟಣದ ಎಲ್ಲಾ ಬ್ಯಾಂಕ್‍ಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳ ಕಿರುಸಾಲ ಮೇಳಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ‘ಪಟ್ಟಣದಲ್ಲಿ ಸುಮಾರು 210 ಜನ ಬೀದಿ ಬದಿ ವ್ಯಾಪಾರಿಗಳಿದ್ದು ಅವರ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಪಂಚಾಯ್ತಿಯು ನಿರಂತರವಾಗಿ ಶ್ರಮಿಸುತ್ತದೆ ಎಂದರು. ಮತ್ತು 180 ಜನ ಬೀದಿ ಬದಿ ವ್ಯಾಪಾರಿಗಳಿ ವಿವಿಧ ಬ್ಯಾಂಕ್‍ಗಳಿಂದ ಕಿರುಸಾಲ ಯೋಜನೆಯ ಪ್ರಮಾಣ ಪತ್ರಗಳನ್ನು ಗಣ್ಯರು ವಿತರಿಸಿದರು.
ಕುಡುತಿನಿ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಸತ್ಯನಾರಾಯಣರಾವ್ ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬೀದಿಬದಿವ್ಯಾಪಾರಸ್ಥರಿಗೆ ಬ್ಯಾಂಕ್‍ನಿಂದ ಸಿಗುವ ಕಿರುಸಾಲ ಉಪಯುಕ್ತವಾಗಿದೆ ಎಂದರು.
ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಗೀತಾ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಮುಖ್ಯಸ್ಥೆ ಲಕ್ಷ್ಮಿ, ವಿವಿಧ ಬ್ಯಾಂಕ್‍ಗಳ ವ್ಯವಸ್ಥಾಪಕರಾದ ನವೀನ್, ರವಿಕುಮಾರ್, ಪಂಚಾಯ್ತಿ ಸಮುದಾಯ ಅಧಿಕಾರಿ ವೇದಾಮೂರ್ತಿ, ಸದ್ಯಸ್ಯರಾದ ವೆಂಕಟರಮಣ ಬಾಬು, ಹಾಲಪ್ಪ, ಲೆನಿನ್, ದುಗ್ಗೇಪ್ಪ, ಸುನೀಲ್‍ಕುಮಾರ್, ಬೀದಿ ಬದಿ ವ್ಯಾಪಾರಿ ಸಂಘದ ಅಧ್ಯಕ್ಷ ಹಾಗು ಪದಾದಿಕಾರಿಗಳು ಇದ್ದರು.