ಕುಡತಿನಿಯಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ

ಕುಡತಿನಿ ಏ 27 : ಪಟ್ಟಣದ ಅಂಬೇಡ್ಕರ್ ಕಲೋನಿಯಲ್ಲಿನ 17 ನೆ ವಾರ್ಡಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಮೂರು ತಿಂಗಳಿನಿಂದ ದುರಸ್ಥಿಯಲ್ಲಿದ್ದು ಸ್ಥಳೀಯರು ಕುಡಿಯುವ ನೀರಿಗಾಗಿ ಬಹಳಷ್ಟು ಕಷ್ಟ ಪಡುತ್ತಿದ್ದಾರೆ
.ಹೌದು ಕೂಲಿ ಕಾರ್ಮಿಕ ಕೆಲಸ ಮಾಡುತ್ತಿರುವ ಆದ ಅಲ್ಲಿನ ಸ್ಥಳೀಯರು ನೀರಿಗಾಗಿ ಒಂದು ಕಿಲೋಮೀಟರ್ ನಡೆದುಕೊಂಡು ಹೋಗುವ ಪರಿಸ್ಥಿತಿಗೆ ಒಳಗಾಗಿದ್ದಾರೆ. ಕೂಡಲೇ ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳು ಗಮನಕ್ಕೆ ತೆಗೆದುಕೊಂಡು ಶುದ್ಧ ಕುಡಿಯುವ ನೀರಿನ ವ್ಯವಸ್ತೆಯನ್ನು ಕಲ್ಪಿಸಬೇಕೆಂದು ವಾರ್ಡಿನ ಸದಸ್ಯರಾದ ಭಾಗ್ಯಮ್ಮ ಇವರ ಒತ್ತಾಯ ವಾಗಿರುತ್ತದೆ..
ಈ ಘಟಕವನ್ನು ಬಳ್ಳಾರಿಯ ಭೂ ಸೇನಾ ನಿರ್ವಹಿಸುತ್ತಿದ್ದು ಅವರನ್ನು ಕರೆಯಿಸಿ ಶೀಘ್ರವಾಗಿ ಸಮಸ್ಯೆಯನ್ನ ಪರಿಹರಿಸಲಾಗುವುದು ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ತೀರ್ಥಪ್ರಸಾದ ಇವರು ತಿಳಿಸಿದರು.