ಕುಟುಂಬ ವರ್ಗದ ಸೇವೆ ಇತರರಿಗೆ ಮಾದರಿಯಾಗಲಿ:ಸೋಮೇಶ್ವನಾಂದ ಶ್ರೀಗಳು

ಸೈದಾಪುರ:ಸೆ.8:ದಿವಂಗತರ ಪುಣ್ಯತಿಥಿ ಅಂಗವಾಗಿ ಜನಪರ ಸೇವೆಯಲ್ಲಿ ತೊಡಗಿಸಿಕೊಂಡಿರುವ ತುಮಕೂರ ಕುಟುಂಬ ವರ್ಗದವರ ಈ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದು ಸಿದ್ಧರೂಢ ಸಿದ್ಧಚೇತಾಶ್ರಮದ ಸೋಮೇಶ್ವರಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಹೆಗ್ಗಣಗೇರಾ ಗ್ರಾಮದಲ್ಲಿ ದಿವಂಗತ ಈಶಪ್ಪಗೌಡ ತುಮಕೂರು ಇವರ 2ನೇ ವರ್ಷದ ಪುಣ್ಯತಿಥಿ ಸ್ಮರಣಾರ್ಥವಾಗಿ ತುಮಕೂರು ಕುಟಂಬ ವರ್ಗದವರು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ರಕ್ತ ಗುಂಪು ತಪಾಸಣಾ ಶಿಬಿರ, ಸಾಮಾಗ್ರಿಗಳ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ನಮಗಾಗಿ ಬದಕನ್ನು ರೂಪಿಸಿಕೊಟ್ಟು ನಮ್ಮಿಂದ ದೂರವಾದ ಹಿರಿಯರನ್ನು ಸ್ಮರಿಸಿ ಅವರ ಹೆಸರಿನಲ್ಲಿ ಮಾಡುವ ಸೇವಾ ಮನೋಭಾನವೆಯ ಕಾರ್ಯಗಳು ನೆಮ್ಮದಿಯನ್ನುಂಟು ಮಾಡುವಂತಿದೆ. ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿ ಭಗವಂತ ಕಲ್ಪಿಸಿಕೊಡಲಿ ಎಂದು ಆಶೀರ್ವಚನ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ಈಶಪ್ಪ ಕಲಾಲ, ಈರಪ್ಪ ಗೋಪಾಳಿ, ಸಿದ್ದಪ್ಪ ಅಚೇರಿ, ತಿಪ್ಪಯ್ಯ ಬೊಂಬಾಯಿ, ಸಾಬಯ್ಯ ಗೋಪಾಳಿ, ದೊಡ್ಡ ಸಾಬಣ್ಣ ಬಡಿಗೇರ, ಬಸಲಿಂಗಪ್ಪ ಪೂಜಾರಿ, ತಿಮ್ಮಪ್ಪ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಸವರೆಡ್ಡಿಗೌಡ ತುಮಕೂರ, ಶಿಕ್ಷಕ ನಿಂಗರಡ್ಡಿ, ಲಚಮರೆಡ್ಡಿ ಕಲಾಲ, ಬಸವರೆಡ್ಡಿ, ಪರ್ವತರೆಡ್ಡಿಗೌಡ, ಇಮಾಮಸಾಬ, ಕಾಶಪ್ಪ, ಸಣ್ಣ ಸಾಬಣ್ಣ, ಹಣಮಂತ, ಸಾಬರೆಡ್ಡಿ ಬಾಗ್ಲಿ ಸೇರಿದಂತೆ ಇತರರಿದ್ದರು. ರಾಜೇಶ್ವರಿ ಸ್ವಾಗತಿಸಿದರು. ಶಿವರಾಜ ಕಲಾಲ ನಿರೂಪಿಸಿದರು.