ಕುಟುಂಬ ಯೋಜನೆಯಲ್ಲಿ ಪುರುಷರ ಸಹಭಾಗಿತ್ವ ಸಂತೋಷದ ಜೀವನಕ್ಕೆ ದಾರಿ:ಡಾ. ಹುಲಸೂರೆ

ಹುಮನಾಬಾದ :ನ.13: ಕೊವಿಡ 19 ಸಾಂಕ್ರಾಮಿಕಾ ರೋಗದ ಹಿನ್ನೆಲೆಯಲ್ಲಿ ಅನಗತ್ಯ ಗರ್ಭಧಾರಣೆ ತಡೆಯಲು ಪುರುಷ ಕುಟಂಬ ಯೊಜನೆ ಬಗ್ಗೆ ಅರಿವು ಸಹಭಾಗಿತ್ವ ಆರೋಗ್ಯ ಮತ್ತು ಸಂತೊಷದ ಜೀವನಕೆ ದಾರಿ ಯಾಗಿದೆ ಎಂದು ಮುಖ್ಯ ವೈದ್ಯಾದಿಕಾರಿ ಡಾ|| ನಾಗನಾಥ ಹುಲಸುರೆ ತಿಳಿಸಿದರು. ರಾಷ್ಟ್ರಿಯ ಆರೋಗ್ಯ ಅಭಿಯನ ಮತ್ತು ಜಿಲ್ಲಾ ಅರೋಗ್ಯ ಇಲಾಖೆ ಮತ್ತು ತಾಲೂಕಾ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಎನಾಎಸಾವಿ ಪಾಕ್ಷಿಕ 2020ರ ಮಾರ್ಗಸೊಚಿಗಳು ಉದ್ಘಾಟಿಸಿ ಮಾತನಾಡುತ್ತ ನುಡಿದರು. ಕುಟುಂಬ ಯೋಜನೆಯಲ್ಲಿ ಪುರುಷರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ವ್ಸಾಸೆಕ್ಟಮಿ ಪಾಕ್ಷಿಕ ಆಚರಣೆ ಮತ್ತು ಸೇವಾಹಂತದ ಚಟುವಟಿಕೆಗಳನ್ನು ಕುರಿತು ತರಬೇತಿ ನಿಡಿದರು. ಶಸ್ತ್ರಚಿಕಿತ್ಸಕ ಡಾ|| ನಾಗರಾಜ ಚಿಕೋತೆ ಇಬ್ಬರು ಫಲಾನುಬಾsವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿ, ಪುರುಷರ ಶಸ್ತ್ರಚಿಕಿತ್ಸೆ ಬಗ್ಗೆ ಇದ್ದ ತಪ್ಪು ಗ್ರಹಿಕೆ ಮತ್ತು ಉಪಯೋಗ ತಿಳಿಸಿದರು,ತಾಲೂಕಾ ವೈದ್ಯಾಧಿಕಾರಿ ಡಾ||ಅಶೋಕ ಮೈಲಾರೆ ಪ್ರಾಸ್ತಾವಿಸಿ ಮಾತನಾಡಿದರು, ಭಾಲ್ಕಿಯ ಶಸ್ತ್ರಚಿಕಿತ್ಸ ಡಾ|| ಅಬ್ದುಲ ಖಾದರ, ಡಾ||ಅಶ್ಪಾಖಾ, ಸುರೇಶ ಸ್ಟಫಾ, ತೌಸಿಫಾ, ಡಾ||ರವಿಶಂಕರ ಖಂಡ್ರೆ, ಡಾ||ಇಸ್ಮಾಯಿಲಾ, ಶ್ರೀಶೈಲಾ ಮತ್ತು ಸಿಬ್ಬಂದಿಗಳಿದ್ದರು.