ಕುಟುಂಬ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗೆ ಸಹಕರಿಸಿ – ಶಿವಪ್ಪ,


ಸಂಜೆವಾಣಿ ವಾರ್ತೆ
ಸಂಡೂರು: ಜೂನ್: 09:  ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಕುಟುಂಬದ ಎಲ್ಲಾ ಸದಸ್ಯರ ಕೌಟುಂಬಿಕ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ಪ್ರಾರಂಭವಾಗಿದ್ದು, ಹೆಚ್.ಎನ್.ಎಸ್  ಆ್ಯಪ್ ನಲ್ಲಿ ಪಡಿತರ ಚೀಟಿಯ ಸಂಖ್ಯೆಯ ಮೂಲಕ ಎಲ್ಲಾ ಸದಸ್ಯರ ಆರೋಗ್ಯ, ಗರ್ಭಿಣಿಯರ ದಾಖಲಾತಿ,ತಪಾಸಣೆ,ಹೆರಿಗೆ ಮಾಡಿಸುವ ಸ್ಥಳ ಆಯ್ಕೆ, ಶಿಶು ದಾಖಲಾತಿ, ಲಸಿಕಾ ವಿವರ,ಮಕ್ಕಳ ಶಾಲಾ ದಾಖಲಾತಿ ವಿವರ, ಕಿಶೋರಿಯರ ಮಾಹಿತಿ,ಋತುಚಕ್ರ, ವೈಯಕ್ತಿಕ ಶುಚಿತ್ವ, ಸೇವಿಸುವ ಆಹಾರದ ವಿವರ, ಅಪೌಷ್ಟಿಕತೆ ಇದ್ದರೆ ಹೆಚ್ಚುವರಿಯಾಗಿ ಆಹಾರ ದೊರೆಯುವ ಸ್ಥಳ, ಅಸಾಂಕ್ರಾಮಿಕ ರೋಗಗಳಾದ ಬಿ.ಪಿ, ಶುಗರ್,ಕ್ಯಾನ್ಸರ್, ಸ್ಟ್ರೋಕ್, ಹಾಗೂ ಕ್ಷಯ ರೋಗದಂತಹ ಸಾಂಕ್ರಾಮಿಕ ರೋಗಗಳು, ಮತ್ತು ಚಿಕಿತ್ಸೆ ಪಡೆಯುವ ವಿವರಗಳನ್ನು ದಾಖಲಿಸಲಾಗುತ್ತದೆ, ಈ ಸಮೀಕ್ಷೆಯ ಸಹಾಯದಿಂದ ಮುಂದೆ ಈ-ಸಂಜೀವಿನಿ ಮೂಲಕವಾಗಲಿ ಅಥವಾ ನೊಂದಾಯಿಸಿ ಕೊಂಡ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸರಳವಾಗುವ ಕಾರಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ, ಆಶಾ,ಅಂಗನವಾಡಿ ಕಾರ್ಯಕರ್ತೆ ಮತ್ತು ಪಿ.ಹೆಚ್.ಸಿ.ಓ ಅವರು ನಿಗದಿತ ದಿನದಂದು ಪ್ರತಿ ಮನೆ ಮನೆಗೆ ಬೇಟಿ ನೀಡಿ, ಮಾಹಿತಿಯನ್ನು ದಾಖಲಿಸಲಾಗುತ್ತದೆ, ಸರಿಯಾದ ನೆಟ್ ವರ್ಕ್ ನೊಂದಿಗೆ ಸರ್ವರ್ ಸರಿ ಇದ್ದರೆ  ಒಂದು ಕುಟುಂಬದ ಮಾಹಿತಿ ಸೇರಿಸಲು ಕನಿಷ್ಟ 40 ನಿಮಿಷ ಬೇಕಾಗುತ್ತದೆ, ಇಷ್ಟು ಸುದೀರ್ಘ ಸಮೀಕ್ಷೆ ಹಲವು ತೊಡಕುಗಳು ಸಹ ಇದ್ದು, ಪೂರ್ಣ ಮಾಹಿತಿ,ದಾಖಲಾತಿ ನೀಡದಿದ್ದರೆ ಸಮೀಕ್ಷೆ ಅಲ್ಲಿಗೆ ಸ್ಥಗಿತಗೊಳ್ಳುವುದು, ಇದ್ದಕಾಗಿ ಸಾರ್ವಜನಿಕರು ತಾಳ್ಮೆಯಿಂದ ಸಹಕಾರ ಕೊಡಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು,
 ಈ ಸಂದರ್ಭದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆ ತೇಜಮ್ಮ,ಆಶಾ, ಗೋವಿಂದಮ್ಮ, ಘೋರ್ಪಡೆ ನಗರದ ಮಹಿಳೆಯರಾದಲಲಿತಾ,ಅಶ್ವಿನಿ,ಮಂಜುಳಾ ಬಾಯಿ,ಅಫ್ರಿನಾ, ರಿಂಕುದೇವಿ, ಪ್ರೇಮಾ ಕುಮಾರಿ ಇತರರು ಉಪಸ್ಥಿತರಿದ್ದರು