ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆ

(ಸಂಜೆವಾಣಿ ವಾರ್ತೆ)
ರಾಯಚೂರು(ಮಾನವಿ),ಫೆ.೧೧:ನಿವೇಶನ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಒಂದರ ಮೇಲೆ ೧೫ ಮಂದಿಯ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಮದ್ಲಾಪುರ ಗ್ರಾಮದಲ್ಲಿ ನಡೆದಿದೆ.
ಮದ್ಲಾಪುರ ಗ್ರಾಮದ ಮಂಜುನಾಥ ಎನ್ನುವವರಿಗೆ ಸೇರಿದ ನಿವೇಶನವನ್ನು ಹಲ್ಲೆ ಮಾಡಿರುವ ವ್ಯಕ್ತಿಗಳು ಒತ್ತುವರಿ ಮಾಡಿದ್ದರು. ಇದನ್ನು ಪ್ರಶ್ನಿಸಿದ ಮಲ್ಲಿಕಾರ್ಜುನ ಅವರ ಕುಟುಂಬದ ಮೇಲೆ ಅತಿಕ್ರಮಣಕಾರರ ೧೫ ಮಂದಿಯ ಗುಂಪು ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದಾಗಿ ಹಲ್ಲೆಗೊಳಗಾದ ಮಂಜುನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಉಂಟಾದ ಮಾತಿನ ಚಕಮಕಿ, ನಂತರ ಘರ್ಷಣೆಯಾಗಿ ಪರಿವರ್ತನೆಯಾಗಿದೆ. ೧೫ ಜನರ ಗುಂಪು ಹಾಡಹಗಲೇ ಕೊಡಲಿ, ಕಬ್ಬಿಣದ ರಾಡ್, ಬ್ಯಾಟ್, ಕಟ್ಟಿಗೆಯಿಂದ ಅಮಾನುಷವಾಗಿ ಮಲ್ಲಿಕಾರ್ಜುನ ಸೇರಿದಂತೆ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಾನವಿ ಪೊಲೀಸ್ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.