ಕುಟುಂಬದ ಜತೆ ಐಶ್ವರ್ಯ ರೈ ಹೋಳಿ ಆಚರಣೆ

ಮುಂಬೈ,ಮಾ.೩೦- ಬಾಲಿವುಡ್ ನಟಿ ಐಶ್ವರ್ಯ ರೈ ತಮ್ಮ ಕುಟುಂಬದ ಜತೆ ಹೋಳಿ ಆಚರಿಸಿರುವ ಸಂಭ್ರಮದ ಘಳಿಗೆಯನ್ನು ಇನ್ಸ್‌ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಆರಾಧ್ಯ ಜತೆ ಹೋಳಿ ಆಡಿದ ಕಾಮದಹನ
ವನ್ನು ಮಾಡಿದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಈ ಫೋಟೊಗಳನ್ನು ಹಂಚಿಕೊಂಡಿರುವ ಐಶ್ವರ್ಯ ರೈ ಸಂತೋಷ, ಶಾಂತಿ, ಉತ್ತಮ ಆರೋಗ್ಯ, ಎಲ್ಲರಿಗೂ ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರೀತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.
ಈ ಬಗ್ಗೆ ಅಭಿಮಾನಿಗಳು ಇನ್ಸ್‌ಟ್ರಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದು, ನಿಮ್ಮ ಮುಖ ಎಲ್ಲಿ ಅದನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಅಭಿಮಾನಿಯೊಬ್ಬರು ಬರೆದರೆ, ಮತ್ತೊಬ್ಬ ಅಭಿಮಾನಿ ನಾವು ನಿಮ್ಮ ಮುಖ ನೋಡಲು ಬಯಸುತ್ತೇವೆ. ಬೆಂಕಿಯನ್ನಲ್ಲ.
ಹೋಳಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ. ಐಶ್ವರ್ಯ ರೈ ಪುತ್ರಿ ಆರಾಧ್ಯಗೂ ಹೋಳಿ ಹಬ್ಬದ ಶುಭಕೋರಿದ್ದಾರೆ.
ಐಶ್ವರ್ಯ ರೈ ಹಬ್ಬದ ಸಂದರ್ಭಗಳಲ್ಲಿ ಇಂತಹ ಹೊಸ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಆದರೆ, ಬಾಲಿವುಡ್ ಬೆಡಗಿಯ ಮುಖವನ್ನು ನೋಡಲು ಬಯಸುತ್ತಾರೆ. ಇತ್ತೀಚೆಗೆ ಐಶ್ವರ್ಯ ರೈ ಅವರ ತಂದೆಯ ಪುಣ್ಯ ತಿಥಿಯ ಸಂದರ್ಭದಲ್ಲಿ ತಮ್ಮ ಹಾಗೂ ಪುತ್ರಿಯ ಫೋಟೊಗಳನ್ನು ಇನ್ಸ್‌ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ಪ್ರೇಮಿಗಳ ದಿನದಂದು ತಮ್ಮ ಪುತ್ರಿಯ ಜತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಐಶ್ವರ್ಯ ರೈ ೧೪ ವರ್ಷಗಳ ಹಿಂದೆ ತೆರೆ ಕಂಡ ಗುರು ಸಿನಿಮಾದ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದರು.