ಕುಟುಂಬದ ಆರ್ಥಿಕ ಚುಕ್ಕಾಣಿಯೂ ಮಹಿಳೆಯ ಕೈಯಲ್ಲಿ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.11: ಮಹಿಳೆ ಮಕ್ಕಳ ಲಾಲನೆ, ಪಾಲನೆ ಜೊತೆ ಜೊತೆಗೆ ಎಲಾ ಕ್ಷೇತ್ರದಲ್ಲಿ ಗುರುತಿಸಿ ಕೊಂಡು, ಪುರುಷರಿಗೆ ಸರಿ ಸಮಾನವಾಗಿ ದುಡಿದು, ಇಂದು ಸ್ವಾವಲಂಬಿ ಬದುಕಿನಲ್ಲಿ  ಕುಟುಂಬದ ಆರ್ಥಿಕ ಚುಕ್ಕಾಣಿ ಹಿಡಿದಿದ್ದಾಳೆ ಎಂದು ಸಂಪನ್ಮೂಲ ವ್ಯಕ್ತಿಯಾದ ಅರುಣಾ ಕೊಟ್ರೇಶ್ ಹೇಳಿದರು.
ಶುಕ್ರವಾರ ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಟ್ಟೂರು ತಾಲೂಕು ಯೋಜನಾ ವ್ಯಾಪ್ತಿಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ
ಜ್ಯೋತಿ ಬೆಳಗಿ, ನಂತರ ಮಾತನಾಡಿದರು.
ಕುಟುಂಬದ ಆರೋಗ್ಯಕ್ಕಾಗಿ ನಾವುಗಳು ಪ್ಲಾಸ್ಟಿಕ್ ಮುಕ್ತ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಭಾರತಿ ಸುಧಾಕರ ಪಾಟೀಲ ಹೇಳಿದರು.
ಕೊಟ್ಟೂರು ತಾಲೂಕು ಯೋಜನಾಧಿಕಾರಿ ಹೆಚ್.ಡಿ ನವೀನ ಕುಮಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಹಿಳೆಯ ಸ್ವಾವಲಂಬಿ ಬದುಕಿಗೆ ನೆರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಇರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ದಿನಾಚರಣೆ ಸ್ಮರಣಾರ್ಥವಾಗಿ ಈ ದಿನ ಸಂಘದ ಇಬ್ಬರು ಸದಸ್ಯರಿಗೆ  ಆರೋಗ್ಯ ರಕ್ಷಾ ಕಾರ್ಯಕ್ರಮದಡಿಯಲ್ಲಿ ತಲಾ 39400 ರೂ ಚೆಕ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೇವಕ್ಕ್ ಹಾಗೂ ಗೌರಮ್ಮ ,ಯೋಜನೆಯ ಕಾರ್ಯಕರ್ತರಾದ ಎಂ.ಬಿ ಸಾವಿತ್ರಿ, ಯೋಜನೆ ವಲಯ ಮೇಲ್ವಿಚಾರಕರು ವಿ.ಪಿ ನಾಗರಾಜ್ ಮತ್ತು  ಸೇವಾ ಪ್ರತಿನಿಧಿಗಳಾದ  ಯಲ್ಲಮ್ಮ, ಪೂರ್ಣಿಮಾ ಮತ್ತು ಭಾರತಿ ಹಾಗೂ ಕೇಂದ್ರದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

One attachment • Scanned by Gmail