ಕುಟುಂಬದೊಂದಿಗೆ ಗೆಲುವಿನ ಸರ್ಟಿಫಿಕೇಟ್ ಪಡೆದ ಡಾ. ಶರಣಪ್ರಕಾಶ್ ಪಾಟೀಲ್

ಸೇಡಂ, ಮೇ,14: ಸೇಡಂ ವಿಧಾನಸಭೆ ಮತಕ್ಷೇತ್ರದ ಇತಿಹಾಸದಲ್ಲಿ 40,000 ಕ್ಕಿಂತ ಹೆಚ್ಚು ಬಹುಮತಗಳಿಂದ ನಾಲ್ಕನೇ ಬಾರಿಗೆ ವಿಜ್ರಮಣೆಯಿಂದ ಗೆಲುವು ಸಾಧಿಸಿದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಾ. ಶರಣಪ್ರಕಾಶ್ ಪಾಟೀಲ್ ಅವರು (ಸೇಡಂ ಉಪ ವಿಭಾಗ ಸಹಾಯಕ ಆಯುಕ್ತರು) ಹಾಗೂ ಚುನಾವಣಾ ಅಧಿಕಾರಿಗಳಾದ ಕಾರ್ತಿಕ್ ಎಂ (ತಹಸೀಲ್ದಾರ್) ಸಹಾಯಕ ಚುನಾವಣಾ ಅಧಿಕಾರಿಯಾದ ಶಿವರಾಜ್ ಅವರಿಂದ ಕುಟುಂಬದೊಂದಿಗೆ ಗೆಲುವಿನ ಸರ್ಟಿಫಿಕೇಟ್ ಪಡೆದರು. ಈ ವೇಳೆಯಲ್ಲಿ ಡಾ ಪಾಟೀಲರ ಧರ್ಮಪತ್ನಿ
ಶ್ರೀಮತಿ ಭಾಗ್ಯಶ್ರೀ ಎಸ್ ಪಾಟೀಲ್, ಸಹೋದರಾದ ಡಾ. ಜೈಪ್ರಕಾಶ್ ಡಾ. ಓಂ ಪ್ರಕಾಶ್ ಪಾಟೀಲ್, ಬಸವರಾಜ್ ಪಾಟೀಲ್, ಹಾಗೂಸೇಡಂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗೇಶ್ವರರಾವ ಮಾಲಿ ಪಾಟೀಲ್ ಜಿಲ್ಲಾ ಎಸ್ಸಿ ಘಟಕದ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಇದ್ದರು.