ಕುಟುಂಬಗಳಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ : ಮಾಜಿ ಶಾಸಕ ಡೊಂಗರಗಾಂವ

ಅಥಣಿ :ಮೇ.26: ದೇಶವೇ ಒಂದು ಕುಟುಂಬ ಎಂದು ಭಾವಿಸುವವರು ನಾವು, ಅವಿಭಕ್ತ ಕುಟುಂಬ ಪರಿಕಲ್ಪನೆಗೆ ನಮ್ಮ ದೇಶವೇ ಮಾದರಿ, ವ್ಯಕ್ತಿಗಳಲ್ಲಿ ಮಾನ್ವಿ ಮೌಲ್ಯಗಳನ್ನು ಪ್ರತಿಷ್ಟಾವನೆ ಮನೆಯಿಂದಲೇ ಆರಂಭವಾಗುತ್ತದೆ. ಮನೆಗಳೇ ಕುಟುಂಬದ ನೆಲೆ, ಆರೋಗ್ಯ ಸಮಾಜ ನಿರ್ಮಾಣ ಕುಟುಂಬಗಳಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಶಹಾಜಹಾನ ಡೊಂಗರಗಾಂವ ಹೇಳಿದರು,

ಅವರು ತಾಲೂಕಿನ ಹಣಮಾಪೂರ ಗ್ರಾಮದ ಶ್ರೀ ಸಿದ್ದಸಿರಿ ಸಿದ್ಧಾಶ್ರಮದಲ್ಲಿ ಪ. ಪೂ. ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರ ನೇತೃತ್ವದಲ್ಲಿ ಸದ್ಗುರು ಶ್ರೀ ಸಿದ್ದರತ್ನ ಮದಗೊಂಡೇಶ್ವರ್ ಅಪ್ಪಾಜಿಯವರ 13ನೇ ಪುಣ್ಯರಾಧನೆ ಹಾಗೂ ಭಾರತೀಯ ಸಂಸ್ಕøತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ “ಕುಟುಂಬಗಳು ಅಂದು ಇಂದು” ವ್ಯಾಖ್ಯಾನದ ಮೇಲೆ ಅವರು ಮಾತನಾಡುತ್ತಿದ್ದರು ಅವರು ಮುಂದೆ ಮಾತನಾಡುತ್ತಾ ಭಾರತ ದೇಶ ಇಡೀ ಜಗತ್ತಿನಲ್ಲಿ ತನ್ನದೆ ಆದ ಸಂಸ್ಕೃತಿ ಹೊಂದಿದೆ, ಋಷಿಮುನಿಗಳ ತಪಸ್ಸು ಮಾಡಿದ ತಪೆÇೀಭೂಮಿ, ಭಾರತ ದೇಶದಲ್ಲಿ ಸಾವಿರಾರು ಭಾಷಿಕರು ಸಾವಿರಾರು ಜಾತಿಗಳು ಇದ್ದರೂ ಎಲ್ಲರೂ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿಕೊಂಡು ಇಡಿ ಜಗತ್ತಿನಲ್ಲಿ ಭಾರತ ದೇಶವನ್ನು ಮುಂದೆ ತೆಗೆದು ಕೊಂಡು ಹೋಗಲು ಒಂದು ಕುಟುಂಬವನ್ನು ಒಳ್ಳೆಯ ಸಂಸ್ಕೃತಿಯಲ್ಲಿ ಬೆರೆಸುವಲ್ಲಿ ಇಂತಹ ಋಷಿಮುನಿಗಳ ಶ್ರಮವಿದೆ . ಒಂದು ಕುಟುಂಬ ಒಳ್ಳೆಯ ಸಂಸ್ಕೃತಿಯನ್ನು ಪಡೆಯಬೇಕಾದರೆ ಪರಮ ಪೂಜ್ಯರ, ಹಾಗೂ ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ. ನಮ್ಮ ದೇಶದಲ್ಲಿ ಮೊದಲಿನಿಂದಲೂ ಕುಟುಂಬದಲ್ಲಿರುವ ಗುರು ಹಿರಿಯರಿಗೆ ಗೌರವ ವಿತ್ತು ಉದಾಹರಣೆಗೆ ತಾನು ಬೆಳೆದು ಬಂದ ಮನೆ ಬಿಟ್ಟು ಗಂಡನ ಮನೆಗೆ ಬಂದ ಸೋಸೆ ತನ್ನ ಅತ್ತೆ ಮಾವನನ್ನು ತಂದೆ ತಾಯಿಯ ರೂಪದಲ್ಲಿ ನೋಡುತ್ತಿದ್ದರು ಗುರು ಹಿರಿಯರಿಗೆ ಗೌರವ ಕೊಡುವಂತದು ರೂಡಿಯಲ್ಲಿ ಇತ್ತು ಆದರೆ ಈಗಿನ ವಿದ್ಯಮಾನಗಳಲ್ಲಿ ನೋಡಬೇಕಾದರೆ ಅದು ನಸಿಸಿ ಹೋಗುತ್ತಿದೆ ಬದಲಾವಣೆ ಜಗದ ನಿಯಮ ಅಭಿವೃದ್ಧಿ ಹೆuಟಿಜeಜಿiಟಿeಜಸರಿನಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ಕಳೆದು ಕೊಳ್ಳಬಾರದು ಇದುವೆ ಕುಟುಂಬಗಳು ಅಂದು ಇಂದು ಎಂದು ತಿಳಿಸಿದರು.
ನಂತರ ಪ. ಪೂ. ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.
ಈ ಪುಣ್ಯಾರಾಧನೆ ಕಾರ್ಯಕ್ರಮವು ಸತತ ನಾಲ್ಕು ದಿನಗಳವರೆಗೆ ನಡೆಯಲಿದ್ದು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ, ಬಂದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ, ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿ ಆಶೀರ್ವಾದ ಪಡೆದರು.
ಈ ವೇಳೆ ಸೋಮಲಿಂಗೇಶ್ವರ ಪಟ್ಟದೇವರು ಶಿರವಾಳ, ಅಭಿನವ ಮದಗೊಂಡೇಶ್ವರ ಮಹಾರಾಜರು, ಸ್ವರೂಪಾನಂದ ಮಹಾರಾಜರು, ಅಮ್ಮಶಿದ್ದ ಒಡೆಯರ್ ಮಹಾರಾಜರು ಆಲಬಾಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು,