ಕುಖ್ಯಾತ ರೌಡಿ ಸುನೀಲ್ ಕೊಚ್ಚಿ ಕೊಲೆ

ಬೆಂಗಳೂರು,ಏ.೧೧-ಕುಖ್ಯಾತ ರೌಡಿ ಸುನೀಲ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ
ಬ್ಯಾಟರಾಯನಪುರದ ಕಸ್ತೂರಿ ನಗರದಲ್ಲಿ ನಡೆದಿದೆ.
ಕಸ್ತೂರಿ ನಗರದ ಸುನೀಲ್‌ನನ್ನು ನಿನ್ನೆ ಮಧ್ಯ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೊಲೆಯಾದ ಸುನೀಲ್ ರೌಡಿ ಶೀಟರ್ ಸೋಮನ್ ಎಂಬುವನನ್ನು ಹತ್ಯೆ ಮಾಡಿ ಜೈಲಿಗೆ ಹೋಗಿ ಬಂದಿದ್ದನು. ನಂತರ ಸೋಮನ ಸಹಚರರೊಂದಿಗೆ ಆಗಾಗ ಜಗಳ ಕೂಡ ಮಾಡಿಕೊಂಡಿದ್ದರು.
ಸೋಮನ್ ಕೊಲೆ ಮಾಡಿದ ಸೇಡಿಗೆ ಆತನ ಸಹಚರರೇ ಸುನೀಲ್‌ನ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.