ಕುಖ್ಯಾತ ರೌಡಿ ಅಪ್ಪು ಭೀಕರ ಕೊಲೆ


ಬೆಂಗಳೂರು,೨೧-ಹಳೆ ದ್ವೇಷದ ಹಿನ್ನಲೆಯಲ್ಲಿ ಜೈಲಿನಿಂದ ಕೇವಲ ೧೫ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಬಂದಿದ್ದ ಕುಖ್ಯಾತ ರೌಡಿ ರವಿವರ್ಮ ಅಲಿಯಾಸ್ ಅಪ್ಪುನನ್ನು ಐದಾರು ಮಂದಿ ದುಷ್ಕರ್ಮಿಗಳು ಮಚ್ಚು ಚಾಕು ಲಾಂಗ್ ನಿಂದ ಹೊಡೆದು ಭೀಕರವಾಗಿ ಕೊಲೆಗೈದಿರುವ ದುರ್ಘಟನೆ ಅಶೋಕನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ವಿವೇಕನಗರದ ರವಿವರ್ಮ ಅಲಿಯಾಸ್ ಅಪ್ಪು(೨೩)ನನ್ನು ರಾತ್ರಿ ೯.೫೦ರ ವೇಳೆ ಐದಾರು ಮಂದಿ ದುಷ್ಕರ್ಮಿಗಳು ಮಚ್ಚು ಚಾಕು ಲಾಂಗ್ ನಿಂದ ಹೊಡೆದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.
ಟೈಲರಿಂಗ್ ಕೆಲಸ ಮಾಡುತ್ತಿದ್ದ ರೌಡಿ ಅಪ್ಪು ಕೊಲೆ ಕೃತ್ಯವೊಂದರಲ್ಲಿ ಭಾಗಿಯಾಗಿ ಬಂಧಿತ ನಾಗಿ ಜೈಲು ಸೇರಿದ್ದು ೧೫ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ.
ಅಶೋಕನಗರದ ರೋಸ್ ಗಾರ್ಡನ್ ನ ಫಾತಿಮಾ ಗಲ್ಲಿಯ ಸ್ನೇಹಿತನ ಮನೆಗೆ ರಾತ್ರಿ ಬಂದಿದ್ದಾಗ ಕಾದು ಕುಳಿತಿದ್ದ ಐದಾರು ಮಂದಿ ದುಷ್ಕರ್ಮಿಗಳು ಏಕಾಎಕಿ ದಾಳಿ ನಡೆಸಿ ಮಚ್ಚು ಚಾಕು ಲಾಂಗ್ ನಿಂದ ಹೊಡೆದು ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಅಪ್ಪು ನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ sಚಿಅಶೋಕ ನಗರ ಪೊಲೀಸರು
ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಸ್ಥಳೀಯ ಸಿಸಿ ಟಿವಿ ಕ್ಯಾಮರಾದ ದೃಶ್ಯಗಳನ್ನು ತಪಾಸಣೆ ನಡೆಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ ಎಂದರು.

.