ಬೆಂಗಳೂರು,ಜೂ.೨೭- ಲ್ಯಾಪ್‌ಟ್ಯಾಪ್ ಹಾಗೂ ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಮೈಕೋಲೇಔಟ್ ಪೊಲೀಸರು ಬಂಧಿಸಿ ೨೪ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.ಶಂಕರಪುರಂನ ಕಾರ್ತಿಕ್ (೧೯)ಲಕ್ಷ್ಮಣ (೩೩)ಹಾಗೂ ತಮಿಳುನಾಡು ಮೂಲದ ತಮಿಳ್ ಸೆಲ್ವಿ(೨೮)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ ೩೩ ವಿವಿಧ ಕಂಪನಿಗಳ ಲ್ಯಾಪ್ ಟ್ಯಾಪ್ ಗಳು ಹಾಗೂ ೪೦ ವಿವಿದ ಕಂಪನಿಗಳ ಆಂಡ್ರೈಡ್ ಮೊಬೈಲ್ ಗಳು ಸೇರಿ ೨೪ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ.
ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಲ್ಯಾಪ್‌ಟಾಫ್ ಮತ್ತು ಮೊಬೈಲ್ ಪೋನ್‌ಗಳು ಕಳ್ಳತನವಾಗಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು.ತಂಡವು ಮೈಕೋಲೇಔಟ್ ನಲ್ಲಿ ಕಳವು ಮಾಡಿದ್ದ ಮಾಲನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ಶಂಕರಪುರ ವಾಸಿಗಳಾದ ಮೂರು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತೆರೆದ ಬಾಗಿಲ ಮನೆಗಳಿಗೆ ಪ್ರವೇಶಿಸಿ ಮನೆಗಳಲ್ಲಿಟ್ಟಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದಾಗಿ ಒಪ್ಪಿಕೊಂಡಿರುತ್ತಾರೆ.ಆರೋಪಿಗಳಿಂದ ಹೆಚ್.ಪಿ. ಕಂಪನಿಯ ೧೦, ಲೆನೆವೋ ಕಂಪನಿಯ ೦೨, ಡೆಲ್ ಕಂಪನಿಯ ೧೧, ಏಸರ್ ಕಂಪೆನಿಯ ೦೫, ಏಸಸ್ ಕಂಪನಿಯ ೦೪, ತೋಶಿಬಾ ಕಂಪನಿಯ ೦೧ ಲ್ಯಾಪ್‌ಟ್ಯಾಪ್‌ಗಳನ್ನು ಹಾಗೂ ವಿವೋ ಕಂಪೆನಿಯ ೦೯, ಐಟೆಲ್ ಕಂಪನಿಯ, ೦೨, ಐ-ಫೋನ್ ಕಂಪನಿಯ ೦೨, ರೆಡ್ಮಿ ಕಂಪನಿಯ ೦೯, ಓನ್-ಪ್ಲಸ್ ಕಂಪನಿಯ ೦೧, ಸ್ಯಾಮ್‌ಸಂಗ್ ಕಂಪೆನಿಯ ೦೧, ಒಪ್ಪೊ ಕಂಪನಿಯ ೦೩, ರಿಯಲ್-ಮೀ ಕಂಪನಿಯ ೦೭, ನತಿಂಗ್ ಕಂಪೆನಿಯ ೦೧, ನಾರ್ಜೋ ಕಂಪನಿಯ ೦೧, ಇನ್‌ಫಿನಿಕ್ಸ್ ಕಂಪೆನಿಯ ೦೩, ಪೊಕೋ ಕಂಪನಿಯ ೦೧ ಒಟ್ಟು ೩೩ ಲ್ಯಾಪ್‌ಟ್ಯಾಪ್‌ಗಳನ್ನು ಹಾಗೂ ೪೦ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳನ್ನು ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ.ಕೆ. ಬಾಬಾ ಎಸಿಪಿ ಎನ್.ಪ್ರತಾಪ್‌ರೆಡ್ಡಿ ಮಾರ್ಗದರ್ಶನದಲಿ,?ಲ ಮೈಕೋ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎಲ್.ಗಿರೀಶ್, ರವರ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಮದ್ಯದ ನಶೆಯಲ್ಲಿ ಪುಂಡಾಟ ೨೦ ವಾಹನಗಳು ಜಖಂ
ಬೆಂಗಳೂರು,ಜೂ.೨೭- ಮದ್ಯ ಮಾದಕ ದ್ರವ್ಯದ ನಶೆಯಲ್ಲಿ ಪುಂಡಾಟ ನಡೆಸಿ ರಸ್ತೆ ಬದಿ ನಿಂತಿದ್ದ ಕಾರುಗಳನ್ನು ಜಖಂಗೊಳಿಸಿದ ಮೂವರು ಯುವಕರನ್ನು ಸ್ಥಳೀಯರೇ ಹಿಡಿದು ತದುಕಿ,ಮಲ್ಲೇಶ್ವರಂ ಸಂಚಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಯತ್ರಿನಗರ ಮೊದಲನೇ ಮುಖ್ಯ ರಸ್ತೆಯಲ್ಲಿ ನಿನ್ನೆ ರಾತ್ರಿ ಮದ್ಯದ ನಶೆಯಲ್ಲಿ ಚಂದ್ರು ನಾಯ್ಡು ಅಲಿಯಾಸ್ ಸೇಟು ಎಂಬ ಕಾರು ಚಾಲಕ ತನ್ನಿಬ್ಬರು ಸ್ನೇಹಿತರ ಜತೆ ಸೇರಿ ಪುಂಡಾಟ ಮೆರೆದಿದ್ದಾನೆ.ಗಾಯತ್ರಿನಗರದ ನಿವಾಸಿಯಾಗಿದ್ದ ಈತ ಇತ್ತೀಚೆಗೆ ಸುಬ್ರಮಣ್ಯ ನಗರಕ್ಕೆ ಮನೆ ಬದಲಿ
ಸಿದ್ದು ರಾತ್ರಿ ಸ್ನೇಹಿತರ ಜೊತೆಗೂಡಿ ಮದ್ಯ ಸೇವಿಸಿ ಐ೨೦ ಕಾರು ಚಲಾಯಿಸಿಕೊಂಡು ಬಂದು ೧೨ಕ್ಕೂ ಅಧಿಕಕಾರ್, ೧೦ಕ್ಕೂ ಅಧಿಕ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಪುಂಡಾಟ ಮೆರೆದು ರಸ್ತೆ ಬದಿ ನಿಂತಿದ್ದ ೨೦ಕ್ಕೂ ಹೆಚ್ಚು ವಾಹನಗಳನ್ನು ಇವರು ಜಖಂ ಮಾಡಿದ್ದಾರೆ. ಈ ಯುವಕರ ಪುಂಡಾಟ ಹೆಚ್ಚಾದಾಗ ಸ್ಥಳೀಯರೇ ಗಾಡಿಯನ್ನು ಬೆನ್ನಟ್ಟಿ ಇಬ್ಬರು ಯುವಕರಿಗೂ ಥಳಿಸಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಈ ಸಂಬಂಧ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಕುಖ್ಯಾತ ಕಳ್ಳರ ಸೆರೆ ೧೨೦ ಮೊಬೈಲ್ ಗಳು ಜಪ್ತಿ
ಬೆಂಗಳೂರು,ಜೂ.೨೭- ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದ. ಮೂವರು ಕುಖ್ಯಾತ ಕಳ್ಳರನ್ನು ಮಡಿವಾಳ ಪೊಲೀಸರು ಬಂಧಿಸಿ ೨೫ ಲಕ್ಷ ಮೌಲ್ಯದ ೧೨೦ ವಿವಿಧ ಕಂಪನಿಗಳ ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಹೆಚ್ಚು ಮೊಬೈಲ್ ಕಳವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ರಚಿಸಿದ ವಿಶೇಷ ತಂಡವು ಶಿವಮೊಗ್ಗ ಭದ್ರಾವತಿ ತಾಲೂಕಿನ ಮೂವರು ಆರೋಪಿಗಳು ಕಳವು ಮಾಡಿದ್ದ ಮೊಬೈಲ್ ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾರೆ.
ವಿಚಾರಣೆಯಲ್ಲಿ ಆರೋಪಿಗಳು ಬಸ್‌ನಿಲ್ದಾಣ, ದೇವಸ್ಥಾನ ಮತ್ತು ಜನಬಿಡ ಪ್ರದೇಶಗಳಲ್ಲಿ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಆರೋಪಿಗಳಿಂದ ಸ್ಯಾಮ್‌ಸಂಗ್ ಕಂಪನಿಯ ೧೮, ರಿಯಲ್‌ಮಿ ಕಂಪನಿ ೭, ವಿವೋಕಂಪನಿಯ ೧೮ ರೆಡ್‌ಮಿ ಕಂಪನಿಯ ೧೬, ಒಪ್ಪೋ ಕಂಪನಿ ೧೦, ಒನ್‌ಪ್ಲಸ್ ಕಂಪನಿಯ ೮, ಪೋಕೋ ಕಂಪನಿಯ ೩, ನಿರೋ ಕಂಪನಿಯ ೪, ಗೂಗಲ್, ಟೆಕ್ನೋ ಇನ್‌ಫಿನಿಕ್ಸ್,ಹಾನರ್,ನೋಕಿಯಾ ಮೊಟೊರೋಲಾ ತಲಾ ಒಂದು ಸೇರಿ ೧೨೦ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.