ಕುಖ್ಯಾತ ಜೂಜುಕೋರ ಹರೀಶ್ ಗೂಂಡಾ ಕಾಯ್ದೆಯಡಿ ಸೆರೆ

ಬೆಂಗಳೂರು,ಏ.೨೧ ಕುಖ್ಯಾತ ಜೂಜುಕೋರ ಹರಿರಾಜ ಶೆಟ್ಟಿ ಅಲಿಯಾಸ್ ಹರೀಶ್ ನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿಪೊಲೀಸರು ಬಂಧಿಸಿದ್ದಾರೆ.
ನಗರದ ಹಲವು ಕಡೆಗಳಲ್ಲಿನ ರಿಕ್ರೇಯಷನ್ ಕ್ಲಬ್ ಹಾಗೂ ವಿಡಿಯೋ ಗೇಮ್ ಕೇಂದ್ರಗಳಲ್ಲಿ ಜೂಜಾಟ ನಡೆಸಿ ತಲೆನೋವಾಗಿ ಪರಿಣಮಿಸಿದ್ದ ಜೂಜುಕೋರ ಹರಿರಾಜ ಶೆಟ್ಟಿ (೫೫)ಗೂಂಡಾ ಕಾಯ್ದೆಯಡಿ ಬಂಧಿಸಿ ವಿಚಾರಣೆ ನಡೆಸಿ ಜೈಲಿಗೆ ಕಳುಹಿಸಲಾಗಿದೆ.
ನಗರದ ವಿವಿಧ ಠಾಣೆಗಳಲ್ಲಿ ಆರೋಪಿ ಮೇಲೆ ಸುಮಾರು ೧೩ ಪ್ರಕರಣಗಳಿವೆ. ಆರೋಪಿ ವೈಯಾಲಿಕಾವಲ್, ಹೈಗ್ರೌಂಡ್ಸ್, ಕೋರಮಂಗಲ ಸೇರಿ ನಗರದ ವಿವಿಧೆಡೆ ಜೂಜು ಅಡ್ಡೆ ನಡೆಸುತ್ತಿದ್ದ. ಹಲವು ಬಾರಿ ಪ್ರಕರಣ ದಾಖಲಿಸಿದರು ಮತ್ತೆ ಜೂಜು ಅಡ್ಡೆ ನಡೆಸುವುದನ್ನು ಮುಂದುವರೆಸಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಯ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.