ಕುಖ್ಯಾತ ಕಳ್ಳನ ಬಂಧನ: 3.85 ಲಕ್ಷದ ಚಿನ್ನಾಭರಣ ಜಪ್ತಿ

ಕಲಬುರಗಿ,ನ.8-ಕುಖ್ಯಾತ ಕಳ್ಳನೋರ್ವನನ್ನು ಬಂಧಿಸಿರುವ ಆಳಂದ ಪೊಲೀಸರು 3,85,000 ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಆಳಂದ ಪಟ್ಟಣದ ಆಯಾ ಜಂಗಲ್ ಜ್ಯೋತಿ ಬಾ ಫುಲೆ ನಗರದ ಸುನೀಲ ತಂದೆ ಸಂಜುಕುಮಾರ ಕ್ಷೀರಸಾಗರ ಎಂಬಾತನನ್ನೆ ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸ್ಪಿ ಡಾ.ಸಿಮಿ ಮೆರಿಯಮ್ ಜಾರ್ಜ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಆಳಂದ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ಆಳಂದ ಸಿಪಿಐ ಮಂಜುನಾಥ ಎಸ್., ಪಿಎಸ್ಐಗಳಾದ ಮಹಾಂತೇಶ ಪಾಟೀಲ, ಸುವರ್ಣಾ ಹಾಗೂ ಸಿಬ್ಬಂದಿಗಳಾದ ರವೀಂದ್ರ, ಚಂದ್ರಶೇಖರ, ಶಿವಾಜಿ, ಸಂತೋಷ, ಸಿದ್ದರಾಮ ಅವರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ 4 ಕಳ್ಳತನ ಪ್ರಕರಣಗಳ ಪತ್ತೆ ಹಚ್ಚಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಎಸ್ಪಿ ಡಾ.ಸಿಮಿ ಮೆರಿಯಮ್ ಜಾರ್ಜ್ ಶ್ಲಾಘಿಸಿದ್ದಾರೆ.